Webdunia - Bharat's app for daily news and videos

Install App

ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ; ಶೃತಿ- ಚೇತನ್ ರನ್ನು ಖಡಕ್ ಆಗಿ ಪ್ರಶ್ನಿಸಿದ ಐಶ್ವರ್ಯಾ ಸರ್ಜಾ

Webdunia
ಭಾನುವಾರ, 28 ಅಕ್ಟೋಬರ್ 2018 (07:06 IST)
ಬೆಂಗಳೂರು : ನಟಿ ಶೃತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ 5 ಪುಟಗಳ ದೂರು ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಸರ್ಜಾ ಶೃತಿಗೆ ಸವಾಲೆಸೆದಿದ್ದಾರೆ.


ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಐಶ್ವರ್ಯಾ, ಶೃತಿ  ಒಂದು ತಿಂಗಳ ಹಿಂದೆಯಷ್ಟೇ ನನ್ನ ಅಪ್ಪನನ್ನು ಅವರು ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ ಯಾಕೆ?. ಹಾಗೆಯೇ ಅವರು ಈ ಹಿಂದೆ ತಮಿಳು ನಿರ್ಮಾಪಕರ ವಿರುದ್ಧವೂ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದರು. ಹಾಗಾದ್ರೆ ಅದರ ಬಗ್ಗೆ ಅವರು ಈಗ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.


ಅಲ್ಲದೇ ನಮ್ಮಪ್ಪನ ಜೊತೆ ಕೆಲಸ ಮಾಡಲು ಖುಷಿಯಾಗಿದೆ ಅಂತ ಹೇಳುವ ಮೂಲಕ ನಗು ನಗುತ್ತಾ ನನ್ನ ಜೊತೆ ಮಾತನಾಡಿದ್ದು ಯಾಕೆ? ಇದರ ಬಗ್ಗೆ ನನ್ನಲ್ಲಿ ಸಾಕ್ಷಿಗಳಿವೆ. ನಾನು ಈಗ ಅವುಗಳನ್ನು ಬಯಲು ಮಾಡುತ್ತೇನೆ. ಇದರ ಹಿಂದಿನ ಉದ್ದೇಶವೇನು? ಇವೆಲ್ಲದಕ್ಕೂ ಶೃತಿ ಅವರ ಕಡೆಯಿಂದಲೇ ನನಗೆ ಉತ್ತರ ಬೇಕು. ಮುಗ್ಧ ಜನಗಳ ಮೇಲೆ ಆರೋಪ ಮಾಡೋದಕ್ಕೆ ಮೀಟೂ ಧೈರ್ಯ ಕೊಡ್ತು ಅಂತಾ ಹೇಳಿದ್ರೆ ನನಗೆ ನಾಚಿಕೆಯಾಗುತ್ತಿದೆ ಎಂದು ಐಶ್ವರ್ಯಾ ಖಡಕ್ ಆಗಿ ಹೇಳಿದ್ದಾರೆ.


ಇದೇ ವೇಳೆ ನಟ ಚೇತನ್ ವಿರುದ್ಧವೂ ಆರೋಪ ಮಾಡಿದ ಅವರು ನಟ ಚೇತನ್ ಅವರಿಗೆ ಲೈಂಗಿಕ ಕಿರುಕುಳ ಎಂದರೇ ಏನು ಎಂದು ಗೊತ್ತಾ ಎಂದು ಪ್ರಶ್ನೆ ಮಾಡಿದರು. ಒಂದೊಮ್ಮೆ ಸಹ ನಟಿಯನ್ನು ಊಟಕ್ಕೆ ಕರೆಯುವುದು ಲೈಂಗಿಕ ಕಿರುಕುಳ ಎಂದಾದರೆ ನಟ ಚೇತನ್ ಕೂಡ ನನ್ನನ್ನು ಊಟಕ್ಕೆ ಕರೆದಿದ್ದಾರೆ. ಅಲ್ಲದೇ ಪ್ರೇಮ ಬರಹ ಸಿನಿಮಾ ವೇಳೆ ನಟ ಚೇತನ್ ರೊಂದಿಗೆ ಫೋಟೋ ಶೂಟ್, ವರ್ಕ್ ಶಾಪ್ ಮಾಡಲಾಗಿತ್ತು. ಈ ವೇಳೆ ಚೇತನ್ ನನ್ನ ಬೆನ್ನು ಮುಟ್ಟಿದ್ದರು, ಅಲ್ಲದೇ ಊಟಕ್ಕೂ ಕರೆದಿದ್ದರು. ಇದನ್ನು ಲೈಂಗಿಕ ಶೋಷಣೆ ಎಂದು ಕರೆಯಬಹುದುಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Actor Darshan, ಪತ್ನಿ ಜತೆಗೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡು ಖುಷಿಯಲ್ಲಿದ್ದ ದರ್ಶನ್‌ಗೆ ದುಃಖದ ನ್ಯೂಸ್‌

Darshan, Pavithra Gowda: ಪವಿತ್ರಾ ಗೌಡ ಕೋರ್ಟ್ ಮುಂದೆ ಇಟ್ಟ ಹೊಸ ಬೇಡಿಕೆಯೇನು

Darshan Pavithra Gowda: ದರ್ಶನ್ ಜೊತೆ ಮತ್ತೆ ಪವಿತ್ರಾ ಗೌಡ: ನಾ ನಿನ್ನ ಬಿಡಲಾರೆ ಪಾರ್ಟ್ 2 ನಾ ಎಂದ ನೆಟ್ಟಿಗರು

Darshan: ಫೋನ್ ನಂಬರ್ ಕೊಡು ಎಂದು ದರ್ಶನ್ ಮುಂದೆ ಹಠ ಹಿಡಿದ ಪವಿತ್ರಾ ಗೌಡ: ದರ್ಶನ್ ಬೆನ್ನು ಬಿಡದ ಸ್ನೇಹಿತೆ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

ಮುಂದಿನ ಸುದ್ದಿ