Publish Date: Sat, 08 May 2021 (10:51 IST)
Updated Date: Sat, 08 May 2021 (10:52 IST)
ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಎಪಿ ಅರ್ಜುನ್ ತಂದೆಯಾದ ಖುಷಿಯಲ್ಲಿದ್ದಾರೆ. ಪತ್ನಿ ಅನ್ನಪೂರ್ಣ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.
ಕಳೆದ ವರ್ಷ ಇಬ್ಬರೂ ಸರಳ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗಷ್ಟೇ ಅರ್ಜುನ್ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದ್ದರು.
ಇದೀಗ ಮಗ ಹುಟ್ಟಿರುವ ಖುಷಿ ವಿಚಾರವನ್ನು ಹೇಳಿಕೊಂಡಿದ್ದಾರೆ. ದೇವರ ದಯದಿಂದ ಮಗ, ಪತ್ನಿ ಇಬ್ಬರೂ ಆರೋಗ್ಯವಾಗಿದ್ದಾರೆ. ನಿಮ್ಮೆಲ್ಲರ ಹಾರೈಕೆ ನಮ್ಮ ಮೇಲಿರಲಿ ಎಂದು ಅರ್ಜುನ್ ಹೇಳಿದ್ದಾರೆ.