Bigg Boss 8 Kannada: ದಿವ್ಯಾ ಉರುಡುಗ ಟಾಸ್ಕ್ ವಿಷಯದಲ್ಲಿ ಮಾಡಿದ್ದು ತಪ್ಪು ಹಾಗೂ ಮೋಸ ಎಂದು ಪ್ರಶಾಂತ್ ಮಾತು ಆರಂಭಿಸುತ್ತಾರೆ. ಅಲ್ಲಿಂದ ಜಗಳ ಮಾತುಕತೆ ಆರಂಭವಾಗುತ್ತದೆ. ಪ್ರಶಾಂತ್ ಮಾತಿನಿಂದ ಸಿಟ್ಟಿಗೆದ್ದ ಅರವಿಂದ್ ತಾಕತ್ತಿನ ವಿಷಯ ತೆಗೆಯುತ್ತಾರೆ.
ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಯಲ್ಲಿ ಕುಚಿಕು ಗೆಳೆಯ ಚಕ್ರವರ್ತಿ ಸೇರಿದಂತೆ ತುಂಬಾ ಜನರ ಜೊತೆ ಜಗಳ ಆಡೋದು ಸಾಮಾನ್ಯವಾಗಿ ಹೋಗಿದೆ. ಈ ಹಿಂದೆ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರೊಂದಿಗೆ ಜಗಳ ಆಡುವುದರೊಂದಿಗೆ ಪ್ರಶಾಂತ್ ಸಂಬರಗಿ ಚುಚ್ಚು ಮಾತುಗಳನ್ನಾಡುವ ಮೂಲಕ ಮನಸ್ಸಿಗೆ ನೋವು ಮಾಡಿದ್ದರು. ಪ್ರಶಾಂತ್ ಅವರ ಚುಚ್ಚು ಮಾತುಗಳಿಂದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಕಣ್ಣೀರಿಟ್ಟಿದ್ದರು. ಇದೇ ವಿಷಯ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚರ್ಚೆಗೆ ಬಂದಿತ್ತು. ಆಗ ಸುದೀಪ್ ಅವರು ಪ್ರಶಾಂತ್ ಸಂಬರಗಿ ಅವರಿಗೆ ಈ ವಿಷಯವಾಗಿಯೇ ಮಾತಿನ ಚಾಟಿ ಬೀಸಿದ್ದರು. ಆಗಿನಿಂದ ಪ್ರಶಾಂತ್ ಮನೆಯಲ್ಲಿ ಚುಚ್ಚು ಮಾತುಗಳನ್ನು ಆಡುವುದನ್ನು ಕೊಂಚ ಕಡಿಮೆ ಮಾಡಿದ್ದರು. ಆದರೆ ಚುಚ್ಚು ಮಾತು ನಿಲ್ಲಿಸಿದರೂ ಜಗಳ ಮಾತ್ರ ಕಡಿಮೆಯಾಗಿಲ್ಲ.