ಚೆನ್ನೈ: ಅಮೆಝೋನ್ ಕೆನಡಾ ಸಂಸ್ಥೆ ಮೊನ್ನೆಯಷ್ಟೇ ಕನ್ನಡದ ಧ್ವಜವಿರುವ ಮಹಿಳೆಯರ ಒಳ ಉಡುಪುಗಳನ್ನು ಮಾರಾಟ ಮಾಡಿ ಕನ್ನಡಿಗರಿಗೆ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಅದೇ ಅಮೆಝೋನ್ ಸಂಸ್ಥೆಯ ಒಟಿಟಿ ತಾಣ ತಮಿಳರ ಕೆಂಗಣ್ಣಿಗೆ ಗುರಿಯಾಗಿದೆ.
ಅಮೆಝೋನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತಿರುವ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯಲ್ಲಿ ತಮಿಳರನ್ನು ಅವಮಾನಿಸುವ ದೃಶ್ಯವಿದೆ ಎಂಬ ಕಾರಣಕ್ಕೆ ಕೆಂಗಣ್ಣಿಗೆ ಗುರಿಯಾಗಿದೆ.
ಹಲವರು ಸಾಮಾಜಿಕ ಜಾಲತಾಣದ ಮೂಲಕ ಅಮೆಝೋನ್ ಪ್ರೈಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಹಲವರು ತಮ್ಮ ಅಮೆಝೋನ್ ಖಾತೆಯನ್ನೇ ರದ್ದುಗೊಳಿಸಿ ಪ್ರತಿಭಟನೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಹಲವರು ಈ ವೆಬ್ ಸರಣಿಯನ್ನು ನಿಷೇಧಿಸಬೇಕು ಎಂದೂ ಆಗ್ರಹಿಸಿದ್ದಾರೆ.