Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹೈದರಾಬಾದ್: ಪುಷ್ಪ ಸಿನಿಮಾ ಬಳಿಕ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಅಲ್ಲು ಅರ್ಜುನ್ ಹೊಸ ಸುದ್ದಿ ಕೊಡಲು ಮುಂದಾಗಿದ್ದಾರೆ ಎಂಬ ಸುದ್ದಿ ಬಂದಿದೆ.
ಸಿನಿಮಾಗಳಲ್ಲಿ ಸಕ್ಸಸ್ ಕಂಡಿರುವ ಅರ್ಜುನ್ ಕೋಟಿಗಟ್ಟಲೆ ಸಂಭಾವನೆ ಜೇಬಿಗಿಳಿಸುತ್ತಿದ್ದಾರೆ. ಹೀಗಿರುವಾಗ ಸಿನಿಮಾ ಹೊರತಾಗಿ ಬೇರೆ ಉದ್ಯಮದಲ್ಲಿ ಇನ್ ವೆಸ್ಟ್ ಮಾಡುವ ಮನಸ್ಸು ಮಾಡಿದ್ದಾರಂತೆ.
ಮೂಲಗಳ ಪ್ರಕಾರ ಅಲ್ಲು ಅರ್ಜುನ್ ಸದ್ಯದಲ್ಲೇ ತಮ್ಮದೇ ಬ್ರ್ಯಾಂಡ್ ನ ಕ್ಲೋತಿಂಗ್ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಈ ಬಗ್ಗೆ ಸದ್ಯದಲ್ಲೇ ಹೊಸ ಸುದ್ದಿ ಹೊರಬರಲಿದೆ ಎನ್ನಲಾಗಿದೆ.