Publish Date: Thu, 27 Jul 2023 (08:10 IST)
Updated Date: Thu, 27 Jul 2023 (08:45 IST)
ಹೈದರಾಬಾದ್: ಇತ್ತೀಚೆಗೆ ಪರಿಚಿತವಾಗಿ ಥ್ರೆಡ್ ಆಪ್ ನಲ್ಲಿ ಹಲವಾರು ಸೆಲೆಬ್ರಿಟಿಗಳು ಖಾತೆ ತೆರೆದು ಸಕ್ರಿಯರಾಗಿದ್ದಾರೆ. ಟ್ವಿಟರ್ ನಂತಹದ್ದೇ ಲಕ್ಷಣಗಳಿರುವ ಸೋಷಿಯಲ್ ಮೀಡಿಯಾ ಥ್ರೆಡ್ ನಲ್ಲಿ ಅಲ್ಲು ಅರ್ಜುನ್ ಕೂಡಾ ಖಾತೆ ತೆರೆದಿದ್ದಾರೆ.
ಇದೀಗ ಥ್ರೆಡ್ ಆಪ್ ನಲ್ಲಿ ಅವರು ಹೊಸ ದಾಖಲೆಯನ್ನೇ ಬರೆದಿದ್ದಾರೆ. ಈ ಆಪ್ ನಲ್ಲಿ 1 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ ದಾಖಲೆ ಅಲ್ಲು ಅರ್ಜುನ್ ಮಾಡಿದ್ದಾರೆ.
ಈಗಾಗಲೇ ಟ್ವಿಟರ್, ಇನ್ ಸ್ಟಾಗ್ರಾಂನಲ್ಲಿ ಖಾತೆ ಹೊಂದಿರುವ ಅಲ್ಲು ಅರ್ಜುನ್ ಮಿಲಿಯನ್ ಗಟ್ಟಲೆ ಫಾಲೋವರ್ ಗಳನ್ನು ಹೊಂದಿದ್ದಾರೆ. ಇದೀಗ ಥ್ರೆಡ್ ಆಪ್ ನಲ್ಲಿ ನಂ.1 ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.