ಹೈದರಾಬಾದ್ : ವೈಷ್ಣವ್ ತೇಜ್ ಹಾಗೂ ಕೃತಿ ಶೆಟ್ಟಿ ಅಭಿನಯದ ಉಪ್ಪೇನಾ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲು ವಿಜಯ್ ಸೇತುಪತಿ ನಿರ್ಧಾರ ಮಾಡಿದ್ದು, ವಿಜಯ್ ಪುತ್ರ ಈ ರಿಮೇಕ್ ನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು.
ಇದೀಗ ಈ ಚಿತ್ರವನ್ನು ಹಿಂದಿಯಲ್ಲೂ ಕೂಡ ರಿಮೇಕ್ ಮಾಡಲು ನಿರ್ಧರಿಸಲಾಗಿದೆಯಂತೆ. ಇತ್ತೀಚಿನ ಮಾಹಿತಿ ಪ್ರಕಾರ ಬಾಲಿವುಡ್ ನ ಪ್ರಮುಖ ನಿರ್ಮಾಣ ಸಂಸ್ಥೆ ಇಪ್ಪಾನ್ ಖಟ್ಟರ್ ಮತ್ಯು ಅನನ್ಯಾ ಪಾಂಡೆ ಅವರೊಂದಿಗೆ ಉಪ್ಪೇನಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಉತ್ಸುಕವಾಗಿದೆಯಂತೆ. ಅಲ್ಲದೇ ಉಪ್ಪೇನಾ ಚಿತ್ರದ ನಿರ್ಮಾಪಕರಿಗೆ ಇತರ ಭಾಷಾ ನಿರ್ಮಾಪಕರಿಂದ ರಿಮೇಕ್ ಹಕ್ಕುಗಳಿಗಾಗಿ ಬಿಗ್ ಆಫರ್ ಗಳು ಬರುತ್ತಿವೆ ಎಂಬುದಾಗಿ ತಿಳಿದುಬಂದಿದೆ.