ಹೈದರಾಬಾದ್ : ನಿರ್ದೇಶಕ ಶಂಕರ್ ಅವರು ಜುಗಿಬಾ ಎಂಬ ಸಣ್ಣ ಕಥೆ ನಕಲಿ ಮಾಡಿದ್ದಾರೆ ಎಂಬ ಪ್ರಕರಣ ಕೋರ್ಟ್ ನಲ್ಲಿ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಶಂಕರ್ ಅವರಿಗೆ ಯಾವುದೇ ಪುರಾವೆಗಳಿಲ್ಲದೇ ಜಾಮೀನು ರಹಿತ ವಾರೆಂಟ್ ನೀಡಿದ್ದಾರೆ ಎಂದು ವರದಿಯಾಗಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಶಂಕರ್ ಅವರು, ಸರಿಯಾದ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ. ತಮ್ಮ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ ಎಂಬ ವದಂತಿ ಸುಳ್ಳು ಎಂದು ತಿಳಿಸಿದ್ದಾರೆ. ಆನ್ ಲೈನ್ ವರದಿಗಾರರ ದೋಷದಿಂದಾಗಿ ಹೀಗೆ ಹೇಳಲಾಗಿದೆ ಎಂದು ಹೇಳಿದ್ದಾರೆ.