ಬೆಂಗಳೂರು : ಅರ್ಜುನ್ ಸರ್ಜಾ ವಿರುದ್ಧ ದೂರು ನೀಡಿದ್ದ ಶ್ರುತಿ ಹರಿಹರನ್ ಅವರು ಇದೀಗ ಈ ಪ್ರಕರಣದ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ.
ಹೌದು. ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ ಶ್ರುತಿ ಹರಿಹರನ್ ಈ ಪ್ರಕರಣಕ್ಕೆ ಸಾಕ್ಷಿಗಳಾಗಿ ವಿಸ್ಮಯ ಚಿತ್ರದ ನಿರ್ಮಾಪಕ ಉಮೇಶ್, ನಿರ್ದೇಶಕ ಅರುಣ್ ವೈದ್ಯನಾಥನ್, ಸಹನಿರ್ದೇಶಕಿ ಮೋನಿಕಾ, ಮೇಕಪ್ ಮ್ಯಾನ್ ಕಿರಣ್ ಹಾಗೂ ತನ್ನ ಗೆಳತಿ ಯಶಸ್ವಿನಿ ಅವರನ್ನು ದೂರನಲ್ಲಿ ಉಲ್ಲೇಖಿಸಿದ್ದರು.
ಆದಕಾರಣ ಮೊದಲು ಸಾಕ್ಷಿಗಳ ಹೇಳಿಕೆ ಪಡೆದ ಪೊಲೀಶರು ಶ್ರುತಿ ಹರಿಹರನ್ಗೆ ಬಂದು ಹೇಳಿಕೆ ನೀಡಲು ತಿಳಿಸಿದ್ದಾರೆ. ಆದರೆ ಶ್ರುತಿ ಚೆನ್ನೈನಲ್ಲಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ಕಾರಣ ಇನ್ನೂ ವಿಚಾರಣೆಗೆ ಹಾಜರಾಗಿಲ್ಲ ಎಂಬುದಾಗಿ ತಿಳಿದುಬಂದಿದೆ. ಸದ್ಯ ಎರಡನೇ ಬಾರಿ ಶ್ರುತಿ ಹರಿಹರನ್ಗೆ ನೋಟಿಸ್ ನೀಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ