ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವ ಸ್ಲೀಪರ್ ಏಜೆಂಟ್ ಆಗಿದ್ದಾರಂತೆ.
ಅಂದಮಾತ್ರಕ್ಕೆ ಸಮಂತಾ ಅಕ್ಕಿನೇನಿ ಅಭಿಮಾನಿಗಳು ಆತಂಕಪಡುವುದು ಬೇಡ. ಯಾಕೆಂದರೆ ಸಮಂತಾ ಅಕ್ಕಿನೇನಿ ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವುದು ಅಮೆಜಾನ್ ಫ್ರೈಮ್ ನ ‘ದಿ ಫ್ಯಾಮಿಲಿ ಮ್ಯಾನ್ 2 ಎಂಬ ವೆಬ್ ಸೀರಿಸ್ ನಲ್ಲಿ.
ಹೌದು ಸಮಂತಾ ಅಕ್ಕಿನೇನಿ ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದು ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.