ಹೈದರಾಬಾದ್ : ಕಿರಿಕ್ ಪಾರ್ಟಿ ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಖ್ಯಾತ ನಟಿ ಎನಿಸಿಕೊಂಡಿದ್ದಾರೆ.
ಇದೀಗ ರಶ್ಮಿಕಾ ಮಂದಣ‍್ಣ ಅವರಿಗೆ “ನ್ಯಾಷನಲ್ ಕ್ರಷ್ ಆಫ್ ಇಂಡಿಯಾ” ಎಂದು ಕರೆಯಲಾಗುತ್ತಿದೆ. ಹೌದು. ಗೂಗಲ್ ನಲ್ಲಿ ನ್ಯಾಷನಲ್ ಕ್ರಷ್ ಆಫ್ 2020 ಎಂದು ಹುಡುಕಿದರೆ ಅದರಲ್ಲಿ ರಶ್ಮಿಕಾ ಫೋಟೊಗಳು ಕಂಡುಬರುತ್ತಿವೆಯಂತೆ. ಇದು ಹಲವರಿಗೆ ಆಶ್ವರ್ಯವನ್ನುಂಟು ಮಾಡಿದೆ.
ಏಕೆಂದರೆ ಡ್ರೆಸ್ಸಿಂಗ್ ಶೈಲಿಯಲ್ಲಿ ರಶ್ಮಿಕಾ ನ್ಯಾಷನಲ್ ಕ್ರಷ್ ಎಂದು ಕರೆಯುವುದು ಸಹಜ. ಆದರೆ ಅವರು ನಟಿಸಿದ್ದು ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ಬೇರೆ ಭಾಷೆಯಲ್ಲಿ ನಟಿಸಿಲ್ಲ ಎನ್ನಲಾಗಿದೆ. ಆದರೆ ರಶ್ಮಿಕಾ ನಟನೆಯ ಗೀತಾಗೋವಿಂದಂ ಮತ್ತು ಸರಿಲೆರು ನಿಕವ್ವರು ಚಿತ್ರ ಹಿಂದಿಗೆ ಡಬ್ ಮಾಡಲಾಗಿದೆ ಎನ್ನಲಾಗಿದೆ.