ಸ್ಯಾಂಡಲ್ವುಡ್ ನಟಿ ನಿವೀದಿತಾಗೆ ಗೋವಾದಲ್ಲಿ ಕಹಿ ಅನುಭವ ಎದುರಾಗಿದೆ. ಸಾಮಾನ್ಯವಾಗಿ ಗೋವಾ ಎಂದರೆ ಪ್ರೇಮಿಗಳು, ಬಿಕಿನಿ, ಗುಂಡು ತುಂಡುಗೆ ಖ್ಯಾತಿ. ಸುಂದರ ಸಮುದ್ರ ತೀರ, ಮರಳಿನಲ್ಲಿ ಹಾಯಾಗಿ ಮೀಯಲು ಆಗಾಗ ಸಿನಿಮಾ ತಾರೆಗಳು ಗೋವಾಗೆ ಹೋಗುತ್ತಿರುತ್ತಾರೆ.
ಹಾಲಿಡೇ ಎಂಜಾಯ್ ಮಾಡಲು ಹೋಗಿದ್ದ ನಿವೇದಿತಾಗೆ ಗೂಂಡಾಗಳ ತಂಡವೊಂದು ಲೈಂಗಿಕ ಕಿರುಕುಳ ನೀಡಿದೆ. ಸಮುದ್ರ ತೀರದಲ್ಲಿ ಅಡ್ಡಾಡುತ್ತಿರಬೇಕಾದರೆ ಈ ಘಟನೆ ನಡೆದಿದೆ ಎಂದು ನಿವೇದಿತಾ ಹೇಳಿಕೊಂಡಿದ್ದಾರೆ. ಗೋವಾದಲ್ಲಿ ಎರಡು ದಿನ ಉಳಿದುಕೊಳ್ಳಲು, ಅದೂ ಒಂಟಿಯಾಗಿ ನಿರ್ಧರಿಸಿದ್ದರು ನಿವೇದಿತಾ.
ಆಗ ಗೂಂಡಾಗಳ ತಂಡವೊಂದು ಅಸಭ್ಯವಾಗಿ ವರ್ತಿಸಿದೆ. ಕಡೆಗೆ ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಹೋಟೆಲ್ ಸಪ್ಲೈಯರ್ ನಿವೇದಿತಾರನ್ನು ಅವರಿಂದ ಪಾರು ಮಾಡಿದ್ದಾನೆ. ಒಟ್ನಲ್ಲಿ ಯಾರೂ ಕಾಪಾಡದಿದ್ದರೆ ನಿವೇದಿತಾ ಪರಿಸ್ಥಿತಿ ಏನಾಗುತ್ತಿತ್ತೋ ಏನೋ. (ಕೃಪೆಃ ಟೈಂಸ್)
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.