ನಟಿ ರಮ್ಯಾಕೃಷ್ಣ ಮತ್ತೆ ಸ್ಯಾಂಡಲ್ವುಡ್ಗೆ ಆಗಮಿಸಿದ್ದಾರೆ. ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿದ್ದ ಮಾಣಿಕ್ಯ ಚಿತ್ರದಲ್ಲಿ ತಾಯಿ ಪಾತ್ರ ಪೋಷಿಸಿದ್ದರು ರಮ್ಯಾಕೃಷ್ಣ. ಇದೀಗ ಅಂತಹದ್ದೇ ಪಾತ್ರಕ್ಕೆ ಸಹಿ ಹಾಕಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಅಂಜನಿಪುತ್ರ ಚಿತ್ರದಲ್ಲಿ ಕ್ಯೂಟ್ ಮದರ್ ಆಗಿ ಕಾಣಿಸಲಿದ್ದಾರೆ.
ನಿರ್ದೇಶಕರಾಗಿ ಬದಲಾಗಿರುವ ಎ ಹರ್ಷ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಚಿತ್ರ ಇದು. ತಮಿಳಿನ ಪೂಜೈ ಚಿತ್ರದ ರೀಮೇಕ್ ಇದಾಗಿದ್ದು, ಶ್ರುತಿ ಹಾಸನ್ ಮತ್ತು ವಿಶಾಲ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡದಲ್ಲಿ ಪುನೀತ್ಗೆ ಜೋಡಿಯಾಗುತ್ತಿರುವವರು ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ. ಇನ್ನು ಹರ್ಷ ಅವರು ಹನುಮಂತನ ಪರಮಭಕ್ತರಾಗಿದ್ದು ಅದೇ ಹೆಸರಿನಲ್ಲಿ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಈ ಹಿಂದೆ ಜೈ ಮಾರುತಿ 800, ಭಜರಂಗಿ, ವಜ್ರಕಾಯ, ಕಪಿಚೇಷ್ಟೆ ಶೀರ್ಷಿಕೆಯ ಚಿತ್ರಗಳನ್ನು ತೆಗೆದಿದ್ದು ಯಶಸ್ವಿಯೂ ಆಗಿದ್ದಾರೆ. ಈಗ ’ಅಂಜನಿಪುತ್ರ’ ಕೈಗೆತ್ತಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.