Publish Date: Fri, 02 Oct 2020 (23:25 IST)
Updated Date: Fri, 02 Oct 2020 (23:27 IST)
ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಕೇಸ್ ವಿಚಾರಣೆಗೆ ಹಾಜರಾಗುವ ಮುನ್ನ ನಟಿ, ನಿರೂಪಕಿ ಪ್ರಭಾವಿಗಳಿಗೆ ಮೊಬೈಲ್ ಕರೆ ಮಾಡಿದ್ದಾರೆ ಎನ್ನುವ ವಿಷಯ ಚರ್ಚೆಯಾಗುತ್ತಿದೆ.
ಈಚೆಗಷ್ಟೇ ನಟಿ, ನಿರೂಪಕಿ ಅನುಶ್ರೀ ಅವರು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಆದರೆ ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಮತ್ತು ಹಿಂದಿನ ದಿನ ಮೂರು ಪಕ್ಷಗಳ ಪ್ರಮುಖರ ನಾಯಕರಿಗೆ ಕರೆ ಮಾಡಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿದೆ.
ನಟಿ, ನಿರೂಪಕಿ ಅನುಶ್ರೀ ಅವರ ಮೊಬೈಲ್ ಕಾಲ್ ಡೀಟೈಲ್ಸ್ ನ್ನು ಸಿಸಿಬಿ ಪೊಲೀಸರು ತನಿಖೆಗೆ ಒಳಪಡಿಸಿದಾಗ ಈ ವಿಷಯ ಬಹಿರಂಗವಾಗಿದೆ ಎನ್ನಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಡ್ರಗ್ಸ್ ಲಿಂಗ್ ಕೇಸ್ ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿ ಬಂದ ನಂತರದ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ ಅನುಶ್ರೀ.