ಚೆನ್ನೈ : ಪ್ರಭಾಕರ್ ನಿರ್ದೇಶನದ ಸುಂದರಪಾಂಡಿಯನ್ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಲಕ್ಷ್ಮೀ ಮೆನನ್ ಅವರು ಇದೀಗ ತಮ್ಮ ಅಭಿಮಾನಿಗಳಿಗೊಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ.
ನಟಿ ಲಕ್ಷ್ಮೀ ಮೆನನ್ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆಗೆ ಚಾಟ್ ಮಾಡಿದ್ದು, ಆ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಆಘಾತಕಾರಿ ವಿಚಾರವೊಂದನ್ನು ಬಾಯ್ಬಿಟ್ಟಿದ್ದಾರೆ.
ಹೌದು. ನಟಿ ಲಕ್ಷ್ಮೀ ಮೆನನ್ ಗೆ ಅಭಿಮಾನಿಗಳು “ ನೀವು ಒಬ್ಬಂಟಿಯಾಗಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟ. “ನಾಟ್ ಸಿಂಗಲ್” ಎಂದು ತಿಳಿಸಿದ್ದಾರೆ. ಹಾಗೇ ಮದುವೆ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ಅವರು ನಾಚಿಕೊಳ್ಳುವಂತಹ ಸಂಕೇತ ಕಳುಹಿಸಿದ್ದಾರೆ ಎನ್ನಲಾಗಿದೆ. ಅದರಂತೆ ನಟಿ ಲಕ್ಷ್ಮೀ ಮೆನನ್ ಲವ್ ಅಲ್ಲಿ ಬಿದ್ದಿದ್ದಾರೆ ಎಂದು ತಿಳಿಯಲಾಗಿದೆ.