ಬೆಂಗಳೂರು: ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಥಿಗಳಿಗೆ ಸಿಗರೇಟು ಸೇವನೆ ಮಾಡಲೆಂದೇ ಪ್ರತ್ಯೇಕ ಕೊಠಡಿಯಿದೆ. ಆದರೆ ಸಿಗರೇಟು ಸೇವನೆ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಸಿಗರೇಟು ಆರೋಗ್ಯಕ್ಕೆ ಹಾನಿಕಾರಕ. ಬಿಗ್ ಬಾಸ್ ಮನೆಯೊಳಗೆ ಮೊಬೈಲ್, ಮನೆಯವರನ್ನು ಬಿಟ್ಟು ಹೊರಗಿನ ಪ್ರಪಂಚದ ಸಂಪರ್ಕವೇ ಇರದೇ ಎಷ್ಟು ದಿನ ಉಳಿದುಕೊಳ್ಳಬಹುದು ಎಂದು ಪರೀಕ್ಷೆ ಮಾಡಲಾಗುತ್ತದೆ. ಅಂತಹದ್ದರಲ್ಲಿ ಸ್ಪರ್ಧಿಗಳಿಗೆ ಸಿಗರೇಟು ಸೇದದೇ ಇರಕ್ಕಾಗಲ್ವಾ?
ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ. ಪದೇ ಪದೇ ಕೆಲವು ಸ್ಪರ್ಧಿಗಳು ಸಿಗರೇಟು ಸೇವನೆ ಮಾಡುವುದನ್ನು ತೋರಿಸುತ್ತಿದ್ದರೆ ಏನು ಮೌಲ್ಯ ಸಾರಿದಂತಾಯಿತು? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಕಳೆದೆರಡು ಸೀಸನ್ ಗಳಿಂದ ಬಿಗ್ ಬಾಸ್ ನಲ್ಲಿ ಸಿಗರೇಟು ಸೇವನೆ ಮಾಡುವ ಚಟವಿರುವವರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಇದಕ್ಕೆ ಕೆಲವರು ಆಕ್ಷೇಪವೆತ್ತಿದ್ದಾರೆ.