ಬಾಲಿವುಡ್ ನಟಿ ಕಂಗನಾ ರಣಾವತ್ ನಿವಾಸದ ಬಳಿ ತಡರಾತ್ರಿ ಗುಂಡಿನ ಸದ್ದು ಕೇಳಿಬಂದಿದೆ.
ತಡರಾತ್ರಿ ಕಿಟಕಿ ಬಳಿ ಸದ್ದು ಕೇಳಿತು. ಪಟಾಕಿ ಎಂದು ತಿಳಿದು ಸುಮ್ಮನಾಗಿದ್ದೆ. ಆದರೆ ಮತ್ತೊಮ್ಮೆ ಸದ್ದು ಕೇಳಿತು. ಆಗ ತಿಳಿಯಿತು ಯಾರೋ ನನ್ನನ್ನು ಹೆದರಿಸಲು ಗುಂಡು ಹಾರಿಸುತ್ತಿದ್ದಾರೆ ಎಂದು ನಟಿ ಕಂಗನಾ ದೂರಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ನನ್ನ ಧ್ವನಿ ಹತ್ತಿಕ್ಕಲು ಹೀಗೆ ಹೆದರಿಸಲಾಗುತ್ತಿದೆ.
ಆದರೆ ಗುಂಡುಗಳಿಗೆ ಹೆದರುವ ಗುಂಡಿಗೆ ನನ್ನದಲ್ಲ ಎಂದು ಕಂಗನಾ ರಣಾವತ್ ಹೇಳಿಕೊಂಡಿದ್ದು, ಅಪರಿಚಿತರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.