ಹೈದರಾಬಾದ್ : ಬಹುಭಾಷಾ ನಟಿ ಜೆನಿಲಿಯಾ ಅವರಿಗೆ ಕೊರೊನಾ ಬಂದು ಹೋಗಿದ್ದು, ಈ ವಿಚಾರವನ್ನು ಇದೀಗ ಬಹಿರಂಗಪಡಿಸಿದ್ದಾರೆ.
ಮದುವೆಯ ಬಳಿಕ ಸಿನಿಮಾರಂಗದಿಂದ ದೂರ ಉಳಿದ ನಟಿ ಜೆನಿಲಿಯಾ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಿದ್ದರು. ಆದರೆ ಇವರಿಗೆ 3 ವಾರಗಳ ಹಿಂದೆ ಕೊರೊನಾ ಸೋಂಕಿಗೆ ತಗುಲಿದ್ದು, ಈ ವಿಚಾರವನ್ನು ಇದೀಗ ಅಭಿಮಾನಿಗಳೆಗೆ ತಿಳಿಸಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದ ನಟಿ ಇದೀಗ ಗುಣಮುಖರಾಗಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು ಅವರ ಆರೋಗ್ಯ ವಿಚಾರಿಸಿದರೆ, ಇನ್ನೂ ಕೆಲವರು ಇಷ್ಟು ದಿನ ಯಾಕೆ ಹೇಳಿರಲಿಲ್ಲ. ಮುಚ್ಚಿಟ್ಟಿದೇಕೆ? ಎಂದು ಪ್ರಶ್ನಿಸಿದ್ದಾರೆ.