Publish Date: Mon, 28 Sep 2020 (20:10 IST)
Updated Date: Mon, 28 Sep 2020 (20:12 IST)
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪದೇ ಪದೇ ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆ ವೇಳೆ ಬಾಲಿವುಡ್ ಡ್ರಗ್ ಲಿಂಕ್ ಹೊರಬಿದ್ದಿದೆ.
ಇದಕ್ಕೆ ಸಂಬಂಧಿಸಿದ ವಿಚಾರಣೆಯ ಸಮಯದಲ್ಲಿ ಮೂರು ಬಾರಿ ಕಣ್ಣೀರು ಹಾಕಿದ್ದಾರೆ ನಟಿ ದೀಪಿಕಾ ಪಡುಕೋಣೆ. ಆದರೆ ಕಣ್ಣೀರು ಹಾಕುತ್ತಿದ್ದ ನಟಿಗೆ 'ಎಮೋಷನಲ್ ಕಾರ್ಡ್' ಬಳಸಬಾರದೆಂದು ಎನ್‌ಸಿಬಿ ಅಧಿಕಾರಿಗಳು ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.
ನಟಿಯರಾದ ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರನ್ನು ಎನ್ ಸಿ ಬಿ ತನಿಖಾ ಸಂಸ್ಥೆ ವಿಚಾರಣೆ ನಡೆಸಿದೆ.