Publish Date: Wed, 27 Oct 2021 (09:35 IST)
Updated Date: Wed, 27 Oct 2021 (09:36 IST)
ಬೆಂಗಳೂರು: ನಟಿಯೊಬ್ಬರಿಗೆ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದ ಮಾಜಿ ಪ್ರಿಯಕರನನ್ನು ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಬಂಧಿಸಿದ್ದಾರೆ.
ಚಂದನ್ ಪ್ರಸಾದ್ ಬಂಧಿತ. ಈತ ನಟಿ ಅನುಷಾ ಎಂಬವರ ಮೇಲೆ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆತನ ಒತ್ತಡಕ್ಕೆ ಮಣಿದು ಆಕೆಯೂ ಒಪ್ಪಿದ್ದಳು. ಎರಡು ತಿಂಗಳ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ. ಬಳಿಕ ಮನೆ ಬಳಿ ಬಂದು ಕಿರುಕುಳ ನೀಡುತ್ತಿದ್ದ.
ಮೊನ್ನೆಯೂ ಅದೇ ರೀತಿ ಆರೋಪಿ ಅನುಷಾ ಮನೆಗೆ ಬಂದು ಹೊರಗೆ ಬರುವಂತೆ ಬೆದರಿಕೆ ಹಾಕಿದ್ದ. ಇದರಿಂದ ಭಯಗೊಂಡ ಅನುಷಾ ಸ್ನೇಹಿತೆ ಜೊತೆ ಕ್ಯಾಬ್ ಹತ್ತಿ ಹೊರಗೆ ಹೋಗಲು ಪ್ರಯತ್ನಿಸಿದ್ದರು. ಈ ವೇಳೆ ಕ್ಯಾಬ್ ತಡೆದು ಹಲ್ಲೆ ನಡೆಸಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.