Publish Date: Tue, 16 Nov 2021 (17:36 IST)
Updated Date: Tue, 16 Nov 2021 (17:38 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೌರವಾರ್ಥ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿರುವ ಟಾಲಿವುಡ್ ನಟ ವಿಶಾಲ್ ಪುನೀತ್ ಓದಿಸುತ್ತಿದ್ದ ಮಕ್ಕಳನ್ನು ನಾನು ಓದಿಸುತ್ತೇನೆ ಎಂದು ಮತ್ತೊಮ್ಮೆ ಘೋಷಿಸಿದ್ದಾರೆ.
ಪುನೀತ್ ನನ್ನ ಜನ್ಮದಿನವೇ ತೀರಿಕೊಂಡರು. ಅವರ ಸಮಾಜಮುಖೀ ಕೆಲಸಗಳು ನಮಗೆ ಆದರ್ಶವಾಗಿದೆ. ಅವರ ಜೊತೆ ನಾನು ಹೆಚ್ಚು ಸಮಯ ಕಳೆದಿಲ್ಲ. ಹಾಗಿದ್ದರೂ ನನಗೆ ಇಷ್ಟು ನೋವಾಗಿದೆ ಎಂದರೆ ಇಲ್ಲಿ ಅವರೊಂದಿಗೆ ಒಡನಾಡಿದವರಿಗೆ ಎಷ್ಟು ದುಃಖವಿರಬೇಡ?
ಈ ಹಿಂದೆಯೂ ನಾನು ಹೇಳಿದ್ದೇನೆ. ಈಗ ಮತ್ತೊಮ್ಮೆ ಈ ವೇದಿಕೆಯಲ್ಲಿ ಹೇಳುತ್ತಿದ್ದೇನೆ. ಪುನೀತ್ ರಾಜ್ ಕುಮಾರ್ ಓದಿಸುತ್ತಿದ್ದ ಮಕ್ಕಳ ಓದಿನ ಜವಾಬ್ಧಾರಿ ನಾನು ತೆಗೆದುಕೊಳ್ಳುತ್ತೇನೆ. ಅವರ ಕುಟುಂಬದ ಜೊತೆಗೆ ನಾನಿರುತ್ತೇನೆ ಎಂದು ವಿಶಾಲ್ ಹೇಳಿದ್ದಾರೆ.