ಕಾಸರಗೋಡು: ಕನ್ನಡ ಖ್ಯಾತ ನಟ ರಕ್ಷಿತ್ ಶೆಟ್ಟಿ ಅವರು ಇಂದು ಕಾಸರಗೋಡಿನ ಪ್ರಸಿದ್ಧ ಮಧೂರ ದೇವಸ್ಥಾನಕ್ಕೆ ಬೇಟಿ ನೀಡಿ, ದೇವರ ಆಶೀರ್ವಾದ ಪಡೆದರು.
ಮೊದಲ ಭಾರಿಗೆ ಕಾರ್ಣಿಕದ ದೇವಸ್ಥಾನಕ್ಕೆ ಭೇಟಿ ನೀಡಿರುವ ರಕ್ಷಿತ್ ಶೆಟ್ಟಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಟನನ್ನು ಆಡಳಿತ ಮಂಡಳಿ ಗೌರವಿಸಿತು.
ಕರ್ನಾಟಕ-ಕೇರಳ ಗಡಿಯಲ್ಲಿರುವ ಕಾಸರಗೋಡಿನ ಮಧೂರು ದೇವಸ್ಥಾನ ತುಂಬಾನೇ ಪ್ರಸಿದ್ಧಿಯನ್ನು ಪಡೆದಿದೆ. ಮಧುವಾಹಿನಿ ನದಿಯ ದಡದಲ್ಲಿರುವ ಈ ಮೋಡಿಮಾಡುವ ದೇವಾಲಯವು ಪ್ರಬಲ ಸ್ಥಳವೆಂದು ಪರಿಗಣಿಸಲಾಗಿದೆ. ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ಎಂದೂ ಕರೆಯಲ್ಪಡುವ ಮಧುರ್ ದೇವಸ್ಥಾನವು ಉತ್ತರ ಕೇರಳದ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ.
ಇದು ಪ್ರಾಚೀನ ತುಳುನಾಡಿನ ಆರು ಗಣಪತಿ ದೇವಾಲಯಗಳಲ್ಲಿ ಒಂದಾಗಿದೆ . ಉಳಿದ ಐದು ಮಂಗಳೂರಿನ ಶರವು ಮಹಾಗಣಪತಿ , ಆನೆಗುಡ್ಡೆಯಲ್ಲಿ ಮಹಾಗಣಪತಿ ( ಕುಂಬಾಶಿ ), ಹಟ್ಟಿಅಂಗಡಿಯಲ್ಲಿ ಸಿದ್ದಿ ವಿನಾಯಕ (ಕುಂದಾಪುರ), ಇಡಗುಂಜಿಯಲ್ಲಿ ದ್ವಿಭುಜ ಗಣಪತಿ ಮತ್ತು ಗೋಕರ್ಣದಲ್ಲಿ ಗಣಪತಿ. ಇಲ್ಲಿ ನಡೆಯುವ ವಿವಿಧ ಉತ್ಸವಗಳಲ್ಲಿ ಎಲ್ಲೆಡೆಯಿಂದ ಭಕ್ತರು ಆಗಮಿಸುತ್ತಾರೆ