ಬೆಂಗಳೂರು : ನಟನೆಯೇ ಜೀವನ ಎಂದು ಸಿನಿಮಾರಂಗದಲ್ಲೇ ಬಾಳಿ ಬದುಕಿ ಕನ್ನಡಿಗರ ಮನಗೆದ್ದ ಡಾ.ರಾಜ್ ಕುಮಾರ್ ಅವರ ಕುಟುಂಬ ಸದಸ್ಯರೊಬ್ಬರು ಸಿನಿಮಾರಂಗಕ್ಕೆ ಎಂದಿಗೂ ಬರುವುದಿಲ್ಲ ಎಂದು ಹೇಳಿದ್ದಾರೆ.
ಹೀಗೆ ಹೇಳಿದ್ದು ಡಾ .ರಾಜ್ ಕುಮಾರ್ ಅವರ ಮೊಮ್ಮಗಳು, ನಟ ರಾಮ್ ಕುಮಾರ್ ಅವರ ಮಗಳಾದ ಧನ್ಯಾ ರಾಮ್ ಕುಮಾರ್ ಅವರು. ಇತ್ತಿಚೆಗೆ ಇವರು ಸಿನಿಮಾರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಅವರು,’ಇದೆಲ್ಲಾ ಸುಳ್ಳುಸುದ್ದಿ. ನಾನು ಎಂದಿಗೂ ಸಿನಿಮಾ ರಂಗಕ್ಕೆ ಬರುವುದಿಲ್ಲ. ಇಂದಲ್ಲಾ ಮುಂದಿನ ದಿನಗಳಲ್ಲೂ ನಾನು ಸಿನಿಮಾದಲ್ಲಿ ಅಭಿನಯಿಸುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗೇ ಇವರಿಗೆ ಹಾಡುವುದು ಮತ್ತು ವಸ್ತ್ರ ವಿನ್ಯಾಸ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇದ್ದು, ಅದನ್ನೇ ಮುಂದುವರೆಸುವುದಾಗಿಯೂ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ