ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೈ ಅವರು ಪ್ರಾಣಿ ಹಿಂಸೆಯ ವಿರುದ್ಧ ಧ್ವನಿಯೆತ್ತಿದ್ದರಿಂದ ಕಾರಣ ಅವರಿಗೆ ಪೇಟಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ನಾಯಿ ಮರಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ನಟಿ ಐಂದ್ರಿತಾ ಅವರು ಶೂಟಿಂಗ್ ನಲ್ಲಿದ್ದಾಗ ವ್ಯಕ್ತಿಯೊಬ್ಬ ಕಬ್ಬಿಣದ ರಾಡಿನಿಂದ ನಾಯಿ ಮರಿಯನ್ನು ಹೊಡೆಯುವುದನ್ನು ನೋಡಿ ಕೋಪಗೊಂಡು ಆ ವ್ಯಕ್ತಿಯಿಂದ ನಾಯಿ ಮರಿಯನ್ನು ರಕ್ಷಿಸಿ ಅದನ್ನು ಪ್ರಾಣಿ ದಯಾ ಸಂಘಕ್ಕೆ ನೀಡಿದ್ದರು. ಆದ ಕಾರಣ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಅವರು,’ ಪ್ರಾಣಿಗಳನ್ನು ಕೊಲ್ಲುವುದು ಒಳ್ಳೆಯದಲ್ಲ, ಅವುಗಳೂ ಸಹ ನಮ್ಮ ನಡುವಿನ ಭಾಗ. ಪ್ರತಿಯೊಬ್ಬರೂ ಬೀದಿ ನಾಯಿಗಳ ಬಗ್ಗೆ ಜಾಗ್ರತೆ ವಹಿಸಿ , ಸಾಕಬೇಕು. ಸರಕಾರವೇ ಎಲ್ಲವನ್ನೂ ಮಾಡಬೇಕು ಎಂದು ಕಾಯಬಾರದು . ಪ್ರತಿಯೊಬ್ಬರೂ ತಮ್ಮ ಬೀದಿಯಲ್ಲಿರುವ ನಾಯಿಗಳ ಕಾಳಜಿ ವಹಿಸಿ ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ