Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕಿರುತೆರೆ, ಸ್ಯಾಂಡಲ್ ವುಡ್ ನಲ್ಲಿ ನಟಿಸಿ, ಫ್ಯಾಶನ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಈಗ ಮದುವೆಯಾಗಲು ಹೊರಟಿದ್ದಾರೆ.
ಇಷ್ಟು ದಿನ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂದು ಜೆಕೆಗೆ ಪ್ರಶ್ನೆ ಮಾಡುತ್ತಲೇ ಇದ್ದರು. ಇದೀಗ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಜೆಕೆ ಮದುವೆಯಾಗಲು ಹೊರಟಿದ್ದು, ಅವರು ಮದುವೆಯಾಗುತ್ತಿರುವ ಹುಡುಗಿಯೂ ಫ್ಯಾಶನ್ ಲೋಕದ ಪ್ರತಿಭಾವಂತೆಯೇ ಎನ್ನುವುದು ತಿಳಿದುಬಂದಿದೆ.
ಖ್ಯಾತ ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತ ಜೊತೆ ಜೆಕೆ ಮದುವೆಯಾಗಲಿದ್ದಾರೆ. ಜೆಕೆ ಜೊತೆಗಿರುವ ಫೋಟೋ ಪ್ರಕಟಿಸಿರುವ ಸಮಂತಾ ಲೈಫ್ ಲೈನ್ ಎಂದು ಬರೆದುಕೊಂಡಿದ್ದಾರೆ. ಕೆಲವು ದಿನಗಳ ಮೊದಲು ಇಬ್ಬರೂ ಮಿತ್ರರ ಜೊತೆ ಗೋವಾಕ್ಕೆ ತೆರಳಿರುವ ಫೋಟೋಗಳು ವೈರಲ್ ಆಗಿತ್ತು. ಆಗಲೇ ಜೆಕೆ ಅಪರ್ಣಾ ಜೊತೆಗಿರುವ ಫೋಟೋ ಪ್ರಕಟಿಸಿ ನಿನ್ನನ್ನು ಪಡೆದಿರುವುದಕ್ಕೆ ಅದೃಷ್ಟ ಮಾಡಿದ್ದೆ ಎಂದು ಬರೆದುಕೊಂಡಿದ್ದರು. ಆಗಲೇ ಈಕೆ ಜೆಕೆ ಹುಡುಗಿ ಎಂದು ಎಲ್ಲರಿಗೂ ಅನುಮಾನ ಬಂದಿತ್ತು. ಈಗಂತೂ ಸ್ವತಃ ಅಪರ್ಣಾ ಕೂಡಾ ಇಂತಹದ್ದೊಂದು ಪೋಸ್ಟ್ ಮಾಡಿದ ಮೇಲೆ ಇಬ್ಬರ ಸಂಬಂಧ ಕನ್ ಫರ್ಮ್ ಆಗಿದೆ.