Publish Date: Sat, 15 Apr 2023 (16:38 IST)
Updated Date: Sat, 15 Apr 2023 (16:40 IST)
ಬೆಂಗಳೂರು: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅವರ ವೀಸಾ ಕೇಂದ್ರ ಗೃಹ ಇಲಾಖೆ ರದ್ದು ಮಾಡಿದೆ.
ನಟ ಚೇತನ್ ಮೂಲತಃ ಅಮೆರಿಕಾ ಪ್ರಜೆ. ಇಲ್ಲಿ ವೀಸಾ ಪಡೆದು ನೆಲೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಪದೇ ಪದೇ ವಿವಾದಾತ್ಮಕ ಹೇಳಿಕೆಗಳಿಂದ ಬಂಧನಕ್ಕೊಳಗಾಗಿದ್ದರು. ಇದೀಗ ಗೃಹ ಇಲಾಖೆ ಅವರ ವೀಸಾ ಮತ್ತು ಓವರ್ ಸೀಸ್ ಸಿಟಿಜೆನ್ ಶಿಪ್ ಆಫ್ ಇಂಡಿಯಾವನ್ನು ರದ್ದುಗೊಳಿಸಿದೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಚೇತನ್, ಕೇಂದ್ರ ಸರ್ಕಾರ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಕ್ರಮ ಕೈಗೊಂಡಿದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಚೇತನ್ ಗಾಂಜಾವನ್ನು ಅಧಿಕೃತ ಬೆಳೆಯಾಗಿಸಬೇಕು ಎಂದು ವಿವಾದ ಸೃಷ್ಟಿಸಿದ್ದರು. ಅದರ ಬೆನ್ನಲ್ಲೇ ತಿರುಪತಿ ದೇವಾಲಯ ಬೌದ್ಧ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂದಿದ್ದರು. ಇಂತಹ ಹೇಳಿಕೆಗಳಿಂದಲೇ ಅವರು ವಿವಾದಕ್ಕೀಡಾಗಿದ್ದರು.