ಬೆಂಗಳೂರು: ಆರ್. ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಕಥಾ ಸಂಕಲನ ಕನ್ನಡದಲ್ಲಿ ಅನುವಾದಗೊಂಡಿದ್ದು, ಈ ಕಥಾ ಸಂಕಲನ ಈಗ ಧ್ವನಿ ರೂಪದಲ್ಲಿ ಲಭ್ಯವಾಗುತ್ತಿದೆ.
ಮಾಲ್ಗುಡಿ ದಿನಗಳು ಕಥಾ ಸಂಗ್ರಹವನ್ನು ಕನ್ನಡಕ್ಕೆ ಡಾ. ಎಚ್. ರಾಮಚಂದ್ರ ಸ್ವಾಮಿ ಅವರು ಅನುವಾದಿಸಿದ್ದಾರೆ. ಮಾಲ್ಗುಡಿ ಡೇಸ್ ಕತೆಗಳು ಈಗಾಗಲೇ ಪುಸ್ತಕ, ಟಿವಿ ಸರಣಿ ಮೂಲಕ ಜನರಿಗೆ ತಲುಪಿದೆ. ಇದೀಗ ಧ‍್ವನಿ ರೂಪದಲ್ಲಿ ತಲುಪುತ್ತಿದೆ.
ಮಾಲ್ಗುಡಿ ದಿನಗಳು ಕಥಾ ಸಂಗ್ರಹವನ್ನು ಖ್ಯಾತ ನಟ ಅನಿರುದ್ಧ್ ಜತ್ಕಾರ್ ಅವರ ಧ್ವನಿಯಲ್ಲಿ ಕೇಳಬಹುದು. ಆಗಸ್ಟ್ 27 ರಂದು Storytel ಆಪ್ ನಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ಮಾತನಾಡಿರುವ ಅನಿರುದ್ಧ್ ಜತ್ಕಾರ್ ಮಾಲ್ಗುಡಿ ದಿನಗಳು ಎಂಬ ಶ್ರೇಷ್ಠ ಕೃತಿಗೆ ಧ‍್ವನಿ ನೀಡುವ ಸದವಕಾಶ ನನಗೆ ಒದಗಿ ಬಂದಿದೆ. ನನ್ನ ಧ್ವನಿಯ ಮೂಲಕ ಮಾಲ್ಗುಡಿ ದಿನಗಳು ಮುಂದಿನ ಪೀಳಿಗೆಗೆ ಪರಿಚಯಿಸಲ್ಪಡುತ್ತದೆ ಎಂಬುದು ನನಗೆ ಬಹುವಾಗಿ ಧನ್ಯತೆಯನ್ನು ತಂದುಕೊಟ್ಟಿದೆ ಎಂದಿದ್ದಾರೆ.
ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ಸ್ಟೋರಿಟೆಲ್ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡು ಮಾಲ್ಗುಡಿ ದಿನಗಳು ಕತೆಯನ್ನು ಕನ್ನಡದಲ್ಲಿ ಕೇಳಬಹುದಾಗಿದೆ.