ಬೆಂಗಳೂರು: ಕಸ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಳ ಕಳಿ ವ್ಯಕ್ತಪಡಿಸುವ ನಟ ಅನಿರುದ್ಧ್ ಈಗ ಬೆಂಗಳೂರಿನ ಕಸ ಸಮಸ್ಯೆ ಪರಿಹಾರಕ್ಕೆ ಬಿಬಿಎಂಪಿ ಮುಂದೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ನಟ ಅನಿರುದ್ಧ್ ಅವರನ್ನು ಭೇಟಿ ಮಾಡಿ ಸಲಹೆ ಕೇಳಿದೆ. ಈ ಸಂದರ್ಭದಲ್ಲಿ ಕೆಲವು ಅಂಶಗಳ ಸಲಹೆಯನ್ನು ಅವರು ನೀಡಿದ್ದಾರೆ. ಅವರು ನೀಡಿದ ಸಲಹೆಗಳು ಹೀಗಿವೆ:
-
ಘನತ್ಯಾಜ್ಯ ನಿರ್ವಹಣೆ, ಸುರಕ್ಷತೆ, ಹಸಿರು ಹೊದಿಕೆಯ ಹೆಚ್ಚಳ ಮತ್ತು ಆರೋಗ್ಯ, ನೈರ್ಮಲ್ಯ ವಿಚಾರಗಳಿಗಾಗಿ ತಜ್ಞರ ಸಮಿತಿ ರಚಿಸುವುದು.
-
ಪ್ರತಿ ವಾರ್ಡ್ ನಲ್ಲೂ ವಸ್ತು ಸ್ಥಿತಿ ಮೇಲೆ ಕಣ್ಣಿಡಲು ಅಧಿಕಾರಿಗಳು, ಸೇವಾ ಪ್ರತಿನಿಧಿಗಳು, ನಾಗರಿಕರನ್ನೊಳಗೊಂಡ ಸಮಿತಿ ರಚಿಸುವುದು.
-
ನಾಗರಿಕರು ನೇರವಾಗಿ ಸಂಪರ್ಕಿಸಲು ಝೋನಲ್ ಮಾರ್ಷಲ್ ಗಳು,ಅಧಿಕಾರಿಗಳ ಸಂಖ್ಯೆಗಳನ್ನು ರಸ್ತೆ ನಾಮಫಲಕಗಳ ಮೇಲೆ ಬರೆಯುವುದು.
ಇದಲ್ಲದೇ ನಟ ಅನಿರುದ್ಧ್ ನೀಡಿದ ಇತರ ಸಲಹೆಗಳು:
-
ಘನತ್ಯಾಜ್ಯ ನಿರ್ವಹಣೆಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸುವುದು.
-
ಆಯಾ ವಾರ್ಡ್ ಗಳಲ್ಲಿ ಕಂಪೋಸ್ಟ್ ಗಳನ್ನಿಟ್ಟುಕೊಂಡು ತ್ಯಾಜ್ಯ ಸಂಗ್ರಹ ಕಂಪೋಸ್ಟರ್ ಗಳಿಗೆ ಹೋಗುವಂತೆ ನೋಡಿಕೊಳ್ಳುವುದು.
-
ಮೂಲದಲ್ಲಿಯೇ ತ್ಯಾಜ್ಯ ಬೇರ್ಪಡಿಸುವಂತೆ ನೋಡಿಕೊಳ್ಳುವುದು.
-
ತ್ಯಾಜ್ಯ ಸಾಗಿಸಲು ಮುಚ್ಚಿದ, ಯೋಗ್ಯ ವಾಹನಗಳ ಬಳಕೆ ಮಾಡುವುದು.
-
ಹೋಟೆಲ್, ಛತ್ರಗಳ ಬಳಿ ನವೀನ ಮಾದರಿಯ ಕಸದ ತೊಟ್ಟಿಗಳನ್ನಿಡುವುದು.
-
ದಿನಕ್ಕೆ ಮೂರು ಸಲ ಬೇರೆ ಬೇರೆ ಸಮಯದಲ್ಲಿ ಕಸ ಸಂಗ್ರಹಣೆಗೆ ಕ್ರಮ ಕೈಗೊಳ್ಳಬೇಕು.
-
ವಾರ್ಡ್ ಸ್ವಚ್ಛವಾಗಿಟ್ಟುಕೊಂಡ ಪೌರ ಕಾರ್ಮಿಕರಿಗೆ ಬಹುಮಾನ ಕೊಡಬೇಕು.
-
ಸುಲಭ ಶೌಚಾಲಯಗಳನ್ನು ನಿರ್ಮಿಸಿ, ಅವುಗಳ ನಿರ್ವಹಣೆ ಮಾಡಬೇಕು.
-
ಮಹಾಪೂರ ತಡೆಯಲು ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ ಒತ್ತುವರಿಗಳನ್ನು ತೆರವುಗೊಳಿಸಬೇಕು. ಸಾಧ‍್ಯವಾದರೆ ಕಾಲುವೆಗಳ ಮೇಲೆ ಗುಜರಾತ್ ಮಾದರಿಯಂತೆ ಸೋಲಾರ್ ಪ್ಯಾನೆಲ್ ಗಳನ್ನು ಒದಗಿಸಬಹುದು.
-
ಯಲ್ಚೇನಹಳ್ಳಿ, ಕನಕಪುರ ರಸ್ತೆ ಮೈದಾನವನ್ನು ಸ್ವಚ್ಛಗೊಳಿಸುವುದು.
ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳು:
-
ರಸ್ತೆಗಳ ಮೇಲೆ ಎಲ್ಲೆಂದರಲ್ಲಿ ತೂಗಾಡುವ ತಂತಿ, ಕೇಬಲ್ ಗಳನ್ನು ನೆಲದೊಳಗೆ ಸೇರಿಸುವುದು. ಈ ಪರಿಸ್ಥಿತಿಗೆ ಕಾರಣವಾದ ಅಧಿಕಾರಿಗಳು, ಕೇಬಲ್ ಆಪರೇಟರ್ ಗಳಿಗೆ ದಂಡ ವಿಧಿಸಬೇಕು.
-
ಸುರಕ್ಷತೆಗೆ ಆದ್ಯತೆ ಕೊಟ್ಟು ಟ್ರಾನ್ಸ್ ಫಾರಂಗಳನ್ನು ಮಾಡಬೇಕು.
-
ರಸ್ತೆಯಲ್ಲಿ ಅಡ್ಡಾಡುವ ದನಗಳಿಗೆ ಗೋಶಾಲೆಗಳಿಗೆ ಸಾಗಿಸಲು ವ್ಯವಸ್ಥೆ.
-
ಪ್ರಾಣಿ ದಯಾ ಸಂಘಗಳ ನೆರವಿನೊಂದಿಗೆ ಬೀದಿ ನಾಯಿ ಸಮಸ್ಯೆ ನಿವಾರಿಸುವುದು.
-
ರಸ್ತೆ ಗುಂಡಿಗಳು, ಪಾದಚಾರಿ ಮಾರ್ಗಗಳು, ಮೋರಿ ನಿರ್ವಹಣೆಗೆ ತಜ್ಞರ ಸಲಹೆ ಪಡೆದು ವೈಜ್ಞಾನಿಕ ವಿನ್ಯಾಸದ ಅನುಸಾರವಾಗಿ ರಚಿಸುವುದು.
-
ಸಿಸಿಟಿವಿ ಅಳವಡಿಕೆ
-
ಒತ್ತುವರಿ ಪಾದಚಾರಿ ಮಾರ್ಗಗಳ ತೆರವು.
-
ರಸ್ತೆ ಕಾಮಗಾರಿ ಪೂರ್ತಿ ಮಾಡುವುದು.
ಸೌಂದರ್ಯೀಕರಣ ಮತ್ತು ಹಸಿರು ಹೊದಿಕೆ
-
ಜಾಹೀರಾತು, ಪೋಸ್ಟರ್ ಅಳವಡಿಕೆಗೆ ನಿಷೇಧ. ಬದಲಾಗಿ ನಿರ್ದಿಷ್ಟ ಶುಲ್ಕಕ್ಕೆ ಡಿಜಿಟಲ್ ಫಲಕ ಒದಗಿಸುವುದು.
-
ಮರಗಳಿಗೆ ಮೊಳೆ, ಕಂಬಿ ಹೊಡೆಯುವುದಕ್ಕೆ ಕಡಿವಾಣ ಹಾಗೂ ದಂಡ ವಿಧಿಸುವುದು.
-
ರಸ್ತೆ ವಿಭಜಕಗಳ ನಡುವೆ ಮರ/ಗಿಡ ನೆಟ್ಟು ನೀರಿನ ಸೌಲಭ್ಯ ಒದಗಿಸುವುದು.
-
ಖಾಲಿ ಇರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸುವುದು.
-
ಲಾಲ್ ಭಾಗ್ ನ ಕಂಪೌಂಡ್ ಗೋಡೆ ತೆಗೆದು ಎಂಎಸ್ ಗ್ರಿಲ್ ಗಳನ್ನು ಅಳವಡಿಸಿ ಜನರಿಗೆ ಚೆನ್ನಾಗಿ ಕಾಣುವಂತೆ ಮಾಡುವುದು.
ಕೆರೆಗಳ ಪುಜರುಜ್ಜೀವನ:
-
ಕೆರೆಗಳು ತ್ಯಾಜ್ಯ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು.
-
ಕೆರೆಗಳ ಸುತ್ತ ಗ್ರಿಲ್ ಅಳವಡಿಸಬೇಕು.
-
ಕೆರೆಗಳನ್ನು ಸ್ವಚ್ಛಗೊಳಿಸಿ, ಸುಂದರವನ್ನಾಗಿ ಮಾಡಿದ ಮೇಲೆ ಅವುಗಳ ನಿರ್ವಹಣಾ ವೆಚ್ಚಕ್ಕೆ ಆದಾಯ ಗಳಿಸಲು ಸಾಮಾಜಿಕ ಮತ್ತು ಮನರಂಜನಾ ಚಟುವಟಿಕೆಗಳಾದ ಬೋಟಿಂಗ್, ಪಾದಚಾರಿ ಪಥ, ಪಾರ್ಕ್, ಮತ್ತು ಉಪಹಾರ ಗೃಹಗಳನ್ನು ತೆರೆಯುವುದು.