Webdunia - Bharat's app for daily news and videos

Install App

ನಗುವಿನ ಹೂಗಳ ಮೇಲೆ ಸಿನಿಮಾದಲ್ಲಿ ಹೀರೋ ಆಗಿ ಎಂಟ್ರಿ ಕೊಡ್ತಿದ್ದಾರೆ ನಟ ಅಭಿಷೇಕ್

Krishnaveni K
ಸೋಮವಾರ, 5 ಫೆಬ್ರವರಿ 2024 (14:37 IST)
ಬೆಂಗಳೂರು: ಗಟ್ಟಿಮೇಳ ಧಾರವಾಹಿಯ ವಿಕ್ರಾಂತ್ ಪಾತ್ರದಿಂದ ಜನ ಮನ ಗೆದ್ದಿರುವ ನಟ ಅಭಿಷೇಕ್ ರಾಮ್‍ ದಾಸ್ ಈಗ ಸೋಲೋ ಹೀರೋ ಆಗಿ ಅಭಿನಯಿಸುತ್ತಿರುವ ‘ನಗುವಿನ ಹೂಗಳ ಮೇಲೆ’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

ಈ ಮೊದಲು ಕೆಂಪಿರ್ವೆ ಎನ್ನುವ ಸಿನಿಮಾ ನಿರ್ದೇಶಿಸಿದ್ದ ವೆಂಕಟ್ ಭಾರದ್ವಾಜ್ ನಿರ್ದೇಶನದ ಸಿನಿಮಾ ನಗುವಿನ ಹೂಗಳ ಮೇಲೆ. ಈ ಸಿನಿಮಾ ಫೆಬ್ರವರಿ 9 ರಂದು ರಾಜ್ಯಾದ್ಯಂತ ಸುಮಾರು 200 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಹೊಸಬರೇ ಮಾಡಿರುವ ಯೂಥ್ ಫುಲ್ ಸ್ಟೋರಿ ಇರುವ ಸಿನಿಮಾ. ಅಭಿಷೇಕ್ ರಾಮ್ ದಾಸ್ ನಾಯಕರಾಗಿರುವ ಸಿನಿಮಾದಲ್ಲಿ ಗಟ್ಟಿಮೇಳ ಧಾರವಾಹಿ ಖ್ಯಾತಿಯ ಶರಣ್ಯಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಜೊತೆಗೆ ಗಿರೀಶ್ ಬೆಟ್ಟಪ್ಪ, ಆಶಾ, ಸುಜಯ್ ಮುಂತಾದವರ ತಾರಾಗಣವಿದೆ.

ಏಕಾಂಗಿ ಹೀರೋ ಆಗಿ ಅಭಿಷೇಕ್ ಗೆ ಮೊದಲ ಸಿನಿಮಾ
ರೆಬಲ್ ಸ್ಟಾರ್ ಅಂಬರೀಶ್ ಜೊತೆ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದಲ್ಲಿ ನಟಿಸಿದ್ದರೂ ನಟ ಅಭಿಷೇಕ್ ಗೆ ಖ್ಯಾತಿ ತಂದುಕೊಟ್ಟಿದ್ದು ಗಟ್ಟಿಮೇಳ ಧಾರವಾಹಿ. ಈಗಾಗಲೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಮರೀಚಿ ಎಂಬಿತ್ಯಾದಿ ಸಿನಿಮಾಗಳಲ್ಲಿ ನಟಿಸಿದ್ದ ಅಭಿಷೇಕ್ ಗೆ ಏಕಾಂಗಿ ಹೀರೋ ಆಗಿ ಇದು ಮೊದಲ ಸಿನಿಮಾ. ಅದೂ ಮಾಸ್ ಕತೆಗೆ ಬೇಕಾದಂತಹ ಎಲ್ಲಾ ಅಂಶಗಳೂ ಈ ಸಿನಿಮಾದಲ್ಲಿದೆ. ಇಷ್ಟು ದಿನ ಚಾಕಲೇಟ್ ಬಾಯ್ ಇಮೇಜ್ ಹೊಂದಿದ್ದ ಅಭಿಷೇಕ್ ಈ ಸಿನಿಮಾದಲ್ಲಿ ಸಾಹಸ ದೃಶ್ಯಗಳಲ್ಲೂ ಅಭಿನಯಿಸಿದ್ದಾರೆ. ಇದಕ್ಕಾಗಿ ಸ್ಟಂಟ್ ತರಬೇತಿಯನ್ನೂ ಪಡೆದುಕೊಂಡಿದ್ದರಂತೆ. ಅಲ್ಲದೆ, ಈ ಮೊದಲು ಧಾರವಾಹಿಯಲ್ಲಿ ಜೊತೆಯಾಗಿ ಕೆಲಸ ಮಾಡಿದ ಶರಣ‍್ಯ ಅವರೇ ನಾಯಕಿಯಾಗಿರುವುದರಿಂದ  ಹೊಂದಾಣಿಕೆ ಸುಲಭವಾಯಿತು. ಜೊತೆಗೆ ನಿಜ ಜೀವನದಲ್ಲಿ ಸ್ನೇಹಿತರಾಗಿರುವ ಗಿರೀಶ್ ಬೆಟ್ಟಪ್ಪ ಸಿನಿಮಾದಲ್ಲಿಯೂ ಸ್ನೇಹಿತನ ಪಾತ್ರ ಮಾಡಿದ್ದು, ತೆರೆ ಮೇಲೆ ಇಬ್ಬರ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ ಅಭಿಷೇಕ್.

ಮೂರು ವರ್ಷಗಳ ಹಿಂದೆಯೇ ಸಿನಿಮಾ ಸೆಟ್ಟೇರಿತ್ತು. ಆದರೆ ಕೊವಿಡ್ ನಿಂದಾಗಿ ಕೊಂಚ ಅಡಚಣೆಯಾಗಿತ್ತು. ಇದೀಗ ರಿಲೀಸ್ ಗೆ ಸಿದ್ಧವಾಗಿದೆ. ಈಗಾಗಲೇ ನಿರ್ದೇಶಕ ಎ. ಹರ್ಷ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಟ್ರೈಲರ್ ನಲ್ಲಿರುವ ಹಿನ್ನಲೆ ಸಂಗೀತ ಗಮನ ಸೆಳೆಯುವಂತಿದೆ. ಈ ಸಿನಿಮಾಗೆ ಸಂಗೀತ ಸಂಯೋಜಿಸಿದವರು ಲವ್ ಪ್ರಾಣ್ ಮೆಹ್ತಾ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ.

ಈಗಾಗಲೇ ಚಿತ್ರತಂಡ ಕಾಲೇಜು, ಈವೆಂಟ್ ಗಳಲ್ಲಿ ಪ್ರಮೋಷನ್ ನಡೆಸಿದೆ. ಒಂದು ಡಿಸ್ಟೇನ್ಸ್ ರಿಲೇಷನ್ ಶಿಪ್ ಸ್ಟೋರಿ ಇರುವ ಸಿನಿಮಾ. ಹೀಗೊಂದು ಕತೆಯಿಟ್ಟುಕೊಂಡು ಬಂದ ಕನ್ನಡ ಸಿನಿಮಾಗಳು ಕಡಿಮೆ. ಹಾಗಾಗಿ ಈ ಸಿನಿಮಾ ಗೆಲ್ಲಬಹುದು ಎಂದು ನಿರೀಕ್ಷೆಯಲ್ಲಿದ್ದಾರೆ ಅಭಿಷೇಕ್.

ನಗುವಿನ ಹೂಗಳ ಮೇಲೆ ಟ್ರೈಲರ್ ಇಲ್ಲಿದೆ ನೋಡಿ:

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments