Publish Date: Mon, 03 Jan 2022 (10:05 IST)
Updated Date: Mon, 03 Jan 2022 (10:08 IST)
ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮಗಳು ಖತೀಜಾ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸಂಗೀತ ಮಾಂತ್ರಿಕ ಇದೀಗ ಮಗಳ ಮದುವೆ ಸಂಭ್ರಮದಲ್ಲಿದ್ದಾರೆ. ಡಿಸೆಂಬರ್ 29 ರಂದು ಚೆನ್ನೈನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಕೊರೋನಾ ನಿಯಂತ್ರಣಗಳನ್ನು ಪಾಲಿಸಿಕೊಂಡು ಖತೀಜಾ ಮತ್ತು ರಿಯಾಸ್ದೀನ್ ಶೇಖ್ ಮೊಹಮ್ಮದ್ ಜೊತೆ ನಿಶ್ಚಿತಾರ್ಥ ನೆರವೇರಿದೆ.
ಕೊರೋನಾ ಕಾರಣದಿಂದ ಕೇವಲ ಕುಟುಂಬಸ್ಥರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸದ್ಯದಲ್ಲೇ ವಿವಾಹ ಕಾರ್ಯಕ್ರಮವೂ ನಡೆಯಲಿದೆ ಎನ್ನಲಾಗಿದೆ.