ಬೀಜಿಂಗ್: ವ್ಯಾಟ್ಸಪ್ ಎನ್ನುವುದು ಇತ್ತೀಚೆಗೆ ನಮ್ಮಲ್ಲರ ದೈನಂದಿನ ಅಗತ್ಯಗಳಲ್ಲಿ ಒಂದು ಎಂದಾಗಿದೆ. ಆದರೆ ಭಾರತದ ನೆರೆಯ ರಾಷ್ಟ್ರ ಚೀನಾದಲ್ಲಿ ವ್ಯಾಟ್ಸಪ್ ಗೆ ನಿಷೇಧ ಹೇರಲಾಗಿದೆ. ಅದಕ್ಕೆ ಕಾರಣ ಏನು ಗೊತ್ತಾ?
ಸೆಪ್ಟೆಂಬರ್ 23 ರಿಂದ ಇಲ್ಲಿ ವ್ಯಾಟ್ಸಪ್ ಗೆ ನಿಷೇಧ ಹೇರಲಾಗಿದೆ ಎಂದು ಚೀನಾದ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ ಪ್ರಕಟಿಸಿದೆ ಎಂದು ಆಂಗ್ಲ ಮಾಧ್ಯಮವೊಂದರಲ್ಲಿ ವರದಿಯಾಗಿದೆ.
ಅಮೆರಿಕಾ ಮೂಲದ ಸಂಸ್ಥೆ ಫೇಸ್ ಬುಕ್ ಒಡೆತನದ ವ್ಯಾಟ್ಸಪ್ ಸೇರಿದಂತೆ ಹಲವು ಇಂಟರ್ನೆಟ್ ಸೇವೆಗಳಿಗೆ ಚೀನಾದಲ್ಲಿ ನಿರ್ಬಂಧ ವಿಧಿಸಲಾಗಿದೆ. ಇಂಟರ್ನೆಟ್ ಮೂಲಕ ನಡೆಯುತ್ತಿರುವ ಅಕ್ರಮಗಳ ಮೇಲೆ ಕಣ್ಣಿಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚೀನಾ ಹೇಳುತ್ತಿದೆ. ಆದರೆ ವ್ಯಾಟ್ಸಪ್ ಸಂಸ್ಥೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ