ದೂರ ಸಂಪರ್ಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ವೊಡಾಫೋನ್ 2018 ರಿಂದ VoLTE ಸೇವೆಗಳನ್ನು ಗ್ರಾಹಕರಿಗೆ ನೀಡುವುದನ್ನು ಖಚಿತಪಡಿಸಿದ್ದು ಹೊಸ ವರ್ಷದಲ್ಲಿ ಗ್ರಾಹಕರಿಗೆ ಉತ್ತಮ ಕೊಡುಗೆಯನ್ನು ನೀಡಿದೆ ಅಂತಲೇ ಹೇಳಬಹುದು.
ಮೊದಲ ಹಂತದಲ್ಲಿ, ಮುಂಬೈ, ಗುಜರಾತ್, ದೆಹಲಿ, ಕರ್ನಾಟಕ, ಮತ್ತು ಕೊಲ್ಕತ್ತಾದಲ್ಲಿ ವೊಡಾಫೋನ್ VoLTE ಸೇವೆಗಳು ಲಭ್ಯವಿದ್ದು ಕೆಲವೇ ದಿನಗಳಲ್ಲಿ ಈ ಸೇವೆಯನ್ನು ದೇಶದಾದ್ಯಂತ ವಿಸ್ತರಿಸಲಾಗುವುದು ಎಂದು ಕಂಪತಿಯ ಮೂಲಗಳು ತಿಳಿಸಿವೆ.
ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲದೇ ಇಂಟರ್ನೆಟ್ ಬಳಸಿ ಉತ್ತಮ ಗುಣಮಟ್ಟದಲ್ಲಿ ಧ್ವನಿ ಕರೆ ಮಾಡುವ ಮೂಲಕ ಸಂಪರ್ಕ ಸಾಧಿಸಲು ಈ ಸೇವೆಯು ಸಹಾಯಕಾರಿಯಾಗಿದ್ದು ಇದಕ್ಕಾಗಿ ವೋಡಾಫೋನ್ 4G ಸಿಮ್ ಹೊಂದುವ ಅಗತ್ಯವಿದೆ ಮತ್ತು VoLTE ಮತ್ತು 4G ಸಿಮ್ ಬೆಂಬಲಿಸುವ ಮೊಬೈಲ್‌ಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸಂಪರ್ಕ ಸೇವೆ ಮತ್ತು ಡೇಟಾ ಸ್ಟ್ರಾಂಗ್ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸುವ ಫ್ಯೂಚರಿಸ್ಟಿಕ್ ತಂತ್ರಜ್ಞಾನವನ್ನು ಪರಿಚಯಿಸುವ ಉದ್ದೇಶದಿಂದ ಈ ಸೇವೆಯನ್ನು ವೊಡಾಫೋನ್ ಸಂಸ್ಥೆ ಆರಂಭಿಸಿದ್ದು ಇದು ಮಾರುಕಟ್ಟೆಯಲ್ಲಿ ಒಂದು ಪ್ರಮುಖ ಹೆಜ್ಜೆ ಎಂದು ವೊಡಾಫೋನ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಸುನಿಸ್ ಸುದ್ ಅವರು ತಿಳಿಸಿದ್ದಾರೆ.
ಪ್ರಸ್ತುತವಾಗಿ ದೇಶದಾದ್ಯಂತ ಜಿಯೋ ಮಾತ್ರವೇ ಈ ಸೇವೆಯನ್ನು ಒದಗಿಸುತ್ತಿದ್ದು, ಭಾರತಿ ಏರ್‌ಟೆರ್ ಪ್ರಮುಖ ನಗರಗಳಲ್ಲಿ ಮಾತ್ರ ಈ ಸೇವೆಯನ್ನು ಹೊಂದಿದ್ದು, ಅದರ ಸಾಲಿಗೆ ವೋಡಾಫೋನ್ ಕೂಡಾ ಸೇರಿಕೊಳ್ಳುತ್ತಿದೆ ಎಂಬುದು ಗಮನಾರ್ಹ.
ಒಟ್ಟಿನಲ್ಲಿ ಹೊಸ ವರ್ಷಕ್ಕೆ ಎಲ್ಲಾ ಟೆಲಿಕಾಂ ಕಂಪನಿಗಳು ಹೊಸ ಹೊಸ ಆಫರ್ ನೀಡುವುದರ ಜೊತೆಗೆ ಗ್ರಾಹಕರನ್ನು ಸೆಳೆಯುತ್ತಿರುವುದಂತು ಸುಳ್ಳಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.