ನೀವು ಹೊಸ ವರ್ಷದಲ್ಲಿ ಬೈಕ್ ಖರೀದಿಸಲು ಬಯಸಿದ್ದರೆ ನಿಮಗೆ ಕಡಿಮೆ ದರ ಉತ್ತಮ ತಂತ್ರಜ್ಞಾನದ ಮತ್ತು ಉತ್ತಮ ಗ್ರಾಫಿಕ್ ಹೊಂದಿರುವ ಬೈಕ್ ನಿಮಗಾಗಿ ಇಲ್ಲಿದೆ.
ಭಾರತದಲ್ಲಿ ದ್ವಿಚಕ್ರ ಮಾರಾಟ ವಲಯದಲ್ಲೇ ಕಡಿಮೆ ನಿರ್ವಹಣೆ ಮತ್ತು ಮೈಲೇಜುಗಳಿಂದ ಹೆಸರುವಾಸಿಯಾಗಿರುವ ಹಿರೋ ಸಂಸ್ಥೆ ತನ್ನ ಗ್ರಾಹಕರಿಗಾಗಿ ನೂತನ ವರ್ಷಕ್ಕೆ ಹೊಸ ಮಾದರಿಯ ಬೈಕ್‌ಗಳನ್ನು ದೆಹಲಿಯಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ 3 ಮಾದರಿಯ ಬೈಕ್‌ಗಳಿದ್ದು ಈ ಬೈಕ್‌ಗಳನ್ನು ಜನವರಿಯಿಂದ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ತಿಳಿಸಿದೆ.
ಹೀರೋ ಸೂಪರ್ ಸ್ಲೆಂಡರ್ ಇದು ಈ ಹಿಂದೆ ಹಿರೋನ ಅತೀ ಹೆಚ್ಚು ಮಾರಾಟದ ಮಾದರಿಯಾಗಳಲ್ಲಿ ಒಂದಾಗಿದ್ದು, ಹೊಸ ವಿನ್ಯಾಸ ಆಕರ್ಷಕ ಗ್ರಾಫಿಕ್‌ಗಳನ್ನು ಈ ಬಾರಿ ಇದರಲ್ಲಿ ಅಳವಡಿಸಲಾಗಿದೆ. ಇದು ಏರ್ ಕೂಲ್ಡ್, 4 ಸ್ಟ್ರೋಕ್ ಸಿಲೆಂಡರ್ ಅನ್ನು ಹೊಂದಿದ್ದು OHC ಸೆಲ್ಪ್ ಸ್ಟಾರ್ಟ್ ಅನ್ನು ನೀಡಲಾಗಿದೆ ಇದು 124.7 ಸಿಸಿ ಎಂಜಿನ್ ಅನ್ನು ಹೊಂದಿದ್ದು 8.5 KW(11.4BHP) @ 7500rpm ಶಕ್ತಿಯನ್ನು ಹೊಂದಿದೆ. ಇದು ಕಿಕ್ ಸ್ಟಾರ್ಟ ಅನ್ನು ಸಹ ಹೊಂದಿದ್ದು ಡಿಜಿಟಲ್ DC CDI ಇಗ್ನಿಷನ್ ಸಿಸ್ಟಂ ಅನ್ನು ಹೊಂದಿದೆ 13 ಲೀಟರ್ ಇಂಧನ ಶೇಕರಣೆ ಸಾಮರ್ಥ್ಯವನ್ನು ಹೊಂದಿದ್ದು, i3S ಇಂಧನ ಉಳಿಸುವ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ ಇದರಲ್ಲಿ ಪ್ರತಿ ಗಂಟೆಗೆ 94 ಕಿಮೀ ವರೆಗೆ ಚಲಿಸಬಹುದಾಗಿದೆ. ಸ್ವಯಂಚಾಲಿತ ಹೆಡ್‌ಲ್ಯಾಂಪ್, ಸೈಡ್ ಸ್ಟೆಂಡ್ ಇಂಡಿಕೇಟರ್, ನಿರ್ವಹಣೆ ರಹಿತ ಬ್ಯಾಟರಿ ಮತ್ತು ಮೊಬೈಲ್ ಚಾರ್ಜರ್ ಪರಿಕರಗಳು ಮತ್ತು ಆಕರ್ಷಕ ಆಸನ ವ್ಯವಸ್ಥೆಯನ್ನು ಸಹ ಇದು ಹೊಂದಿದೆ. ಇದರ ಎಕ್ಸ್ ಶೋ ರೂಂ ಬೆಲೆ ರೂಪಾಯಿ 48,000 ಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.
ಇದು ಸ್ಲೈಂಡರ್ ಮಾದರಿಯ ನಂತರದ ಬೈಕುಗಳಲ್ಲಿ ಅತೀ ಹೆಚ್ಚು ಮಾರಾಟವಾಗುವ ಹಿರೋ ಬೈಕ್‌ಗಳಲ್ಲಿ ಇದು ಕೂಡಾ ಒಂದು. ಹಿರೋ ಪ್ಯಾಶನ್ ತನ್ನ ಹಳೆಯ ಮಾದರಿಯನ್ನು ಮರುವಿನ್ಯಾಸಗೊಳಿಸಿದ್ದು, ಹಿರೋ ಪ್ಯಾಶನ್ ಪ್ರೋ ಆಗಿ ಗ್ರಾಹಕರ ಮುಂದೆ ಬರುತ್ತಿದೆ. ಇದು ಏರ್ ಕೂಲ್ಡ್, 4 ಸ್ಟ್ರೋಕ್ ಸಿಲೆಂಡರ್ ಅನ್ನು ಹೊಂದಿದ್ದು OHC ಸೆಲ್ಪ್ ಸ್ಟಾರ್ಟ್ ಅನ್ನು ಇದು ಅಳವಡಿಸಲಾಗಿದೆ.ಇದು 110 ಸಿಸಿ ಎಂಜಿನ್ ಅನ್ನು ಹೊಂದಿದ್ದು 7.0 KW(9.4BHP) @7500rpm ಶಕ್ತಿಯನ್ನು ಹೊಂದಿದೆ. ಇದರಲ್ಲೀ ಸಹ i3S ಇಂಧನ ಉಳಿಸುವ ತಂತ್ರಜ್ಞಾನವನ್ನು ಅಳವಡಿಸಿರುವುದರ ಜೊತೆಗೆ ಸೆಲ್ಪ ಸ್ಟಾರ್ಟ್ ಮತ್ತು ಕಿಕ್ ಸ್ಟಾರ್ಟ್ ಎರಡನ್ನು ಇದು ಹೊಂದಿದೆ. ಡಿಜಿಟಲ್ DC CD ಇಗ್ನಿಷನ್ ಸಿಸ್ಟಂ ಕೂಡಾ ಇದರಲ್ಲಿದ್ದು ಮುಂಬದಿಯಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಇದರ ಎತ್ತರ 1087 MM ಇದ್ದು ಉದ್ದವು 1962 MM ಆಗಿದೆ ಇದು 116 ಕೆಜಿ ತುಕವನ್ನು ಹೊಂದಿದ್ದು 11 ಲೀಟರ್ ಇಂಧನ ಶೇಕರಣೆ ಸಾಮರ್ಥ್ಯವನ್ನು ಹೊಂದಿರವುದರ ಜೊತೆಗೆ ಇದು ಐದು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದರ ಎಕ್ಸ್ ಶೋ ರೂಂ ಬೆಲೆ 48,000 - 53,000 ರೂಪಾಯಿ ಎಂದು ಅಂದಾಜಿಸಲಾಗಿದೆ.
ಹಿರೋ ಪ್ಯಾಶನ್ ಎಕ್ಸ್‌ಪ್ರೋ 2018
ಹಿರೋ ಪ್ಯಾಶನ್ ಎಕ್ಸ ಪ್ರೋ ಈ ಬೈಕು ಸಹ ಹಲವಾರು ವಿಶೇಷತೆಗಳನ್ನು ಹೊಂದಿದ್ದು ಉತ್ತಮ ಗ್ರಾಫಿಕ್ ವಿನ್ಯಾಸವನ್ನು ಇದರಲ್ಲೂ ಸಹ ಬಳಸಲಾಗಿದೆ ಇದು ಏರ್ ಕೂಲ್ಡ್, 4 ಸ್ಟ್ರೋಕ್ ಸಿಲೆಂಡರ್ OHC ಆಗಿದ್ದು ಸೆಲ್ಪ ಸ್ಟಾರ್ಟ್ ಮತ್ತು ಕಿಕ್ ಸ್ಟಾರ್ಟ್ ಎರಡನ್ನು ಇದು ಹೊಂದಿದೆ. 9.5 ಲೀಟರ್ ಇಂಧನ ಶೇಕರಣೆ ಸಾಮರ್ಥ್ಯವನ್ನು ಹೊಂದಿದ್ದು ಉತ್ತಮ ಗುಣಮಟ್ಟದ ಆಸನ ವ್ಯವಸ್ಥೆಯನ್ನು ಹೊಂದಿದೆ. ಇತ್ತೀಚಿನ ಟ್ರೆಂಡ್ ವಿನ್ಯಾಸವನ್ನು ಈ ಬೈಕ್‌ಗಳಲ್ಲಿ ಅಳವಡಿಸಲಾಗಿದ್ದು iSmart ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಕೂಡಾ ಡಿಜಿಟಲ್-ಅನ್‌ಲಾಗ್ ಮೀಟರ್, AHO, ಪಾರ್ಶ್ವ ಸ್ಟ್ಯಾಂಡ್ ಸೂಚಕ, ನಿರ್ವಹಣೆ-ಮುಕ್ತ ಬ್ಯಾಟರಿ ಮತ್ತು ಐಚ್ಛಿಕ ಮೊಬೈಲ್ ಚಾರ್ಜರ್ ಪರಿಕರಗಳನ್ನು ಒಳಗೊಂಡಿವೆ. ಇದರ ಎಕ್ಸ್ ಶೋ ರೂಂ ಬೆಲೆ 53,000 - 55,000 ರೂಪಾಯಿ ಎಂದು ಅಂದಾಜಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.