ನವದೆಹಲಿ : ವೊಡಾಫೋನ್ ಟೆಲಿಕಾಂ ಸಂಸ್ಥೆ ಗ್ರಾಹಕರಿಗಾಗಿ 45 ರೂ.ವಿನ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ.
ವೊಡಾಫೋನ್ ನ 45 ರೂ.ವಿನ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ನಲ್ಲಿ ಲೋಕಲ್, ನ್ಯಾಷನಲ್ ಕರೆ ಸಿಗಲಿದ್ದು, ಜೊತೆಗೆ ಪ್ರತಿ ಕರೆಯ ಮೇಲೆ 1 ಪೈಸೆಯಷ್ಟು ವೆಚ್ಚವನ್ನು ಭರಿಸಲಿದೆ. ಅಲ್ಲದೇ ಗ್ರಾಹಕರಿಗೆ 4G,3G, 2G ನೆಟ್ವರ್ಕ್ನಡಿಯಲ್ಲಿ 100MB ಡೇಟಾವನ್ನು ಉಚಿತವಾಗಿ ನೀಡುತ್ತಿದೆ.
ಈ ಹೊಸ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅಸ್ಸಾಂ, ಬಿಹಾರ್, ಜಾರ್ಖಂಡ್, ಮುಂಬೈ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಜೊತೆಗೆ ಫುಲ್ಟಾಕ್ ಟೈಮ್ ನೀಡುತ್ತಿದೆ.