ಬೆಂಗಳೂರು: ಆಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಉಬೇರ್ ಮತ್ತು ಓಲಾ ಸಂಸ್ಥೆ, ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಆರೋಪವನ್ನು ಎದುರಿಸುತ್ತಿವೆ. ಉಬೇರ್ ಮತ್ತು ಓಲಾ ಸಂಸ್ಥೆಗಳು ಕಡ್ಡಾಯ ಪರವಾನಿಗೆ ಪಡೆಯದೆ ಕ್ಯಾಬ್ ಸೇವೆಯನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ಸಂಸ್ಥೆಗೆ ಸೇರಿರುವ 100 ವಾಹನಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಆದರೂ, ಈ ಸಂಸ್ಥೆಗಳು ಆರೋಪವನ್ನು ನಿರಾಕರಿಸಿದ್ದು, ಕಡ್ಡಾಯ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿಕೊಂಡಿದೆ.
ಈಗಾಗಲೆ ಸಂಸ್ಥೆ ಹೊಸ ಯೋಜನೆಯ ಅಡಿಯಲ್ಲಿ ಪರವಾನಿಗೆ ಅರ್ಜಿಯನ್ನು ಸಲ್ಲಿಸಿದೆ. ಮತ್ತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಗೆ ತನ್ನ ಆಕ್ಷೇಪಣೆಗಳನ್ನು ಕಳುಹಿಸಲಾಗಿದ್ದು, ನಮ್ಮ ಆಕ್ಷೇಪಣೆಗಳನ್ನು ಪರಿಗಣಿಸಲಾಗಿಲ್ಲ ಎಂದು ಉಬೇರ್ ಸಂಸ್ಥೆಯ ವಕ್ತಾರರು ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ