Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೊಬೈಲ್ ಆಪ್ಸ್‌ ಬಳಸಿ ಪ್ರಯಾಣಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

ಮೊಬೈಲ್ ಆಪ್ಸ್‌ ಬಳಸಿ ಪ್ರಯಾಣಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ
ನವದೆಹಲಿ , ಶನಿವಾರ, 30 ಏಪ್ರಿಲ್ 2016 (12:38 IST)
ಭಾರತೀಯ ಪ್ರಯಾಣಿಕರಲ್ಲಿ ಮೂರನೇಯ ಒಬ್ಬ ವ್ಯಕ್ತಿ ತಮ್ಮ ರಜೆ ದಿನಗಳ ಪ್ರವಾಸವನ್ನು ಮೊಬೈಲ್ ಪೋನ್ ಮೂಲಕ ಬುಕ್ ಮಾಡುತ್ತಾರೆ ಎಂದು ಆನ್‌ಲೈನ್‌ ಟ್ರಾವೆಲ್ ಪೋರ್ಟಲ್ ಯಾತ್ರಾ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತೀಯ ಪ್ರಯಾಣಿಕರ ತಂತ್ರಜ್ಞಾನದ ಮೂಲಕ ತಮ್ಮ ಸುಖಕರ ಪ್ರಯಾಣವನ್ನು ನಿರ್ಧರಿಸುತ್ತಾರೆ.
 
ಪ್ರಯಾಣಿಕರ ಮೊಬೈಲ್ ಬುಕಿಂಗ್ ಡೇಟಾಗಳನ್ನು ಗಮನಿಸಿದರೆ, 2014 ರ ಸಾಲಿನಿಂದ ಪ್ರತಿ ವರ್ಷ ಮೊಬೈಲ್ ಪೋನ್ ಮೂಲಕ ಪ್ರವಾಸವನ್ನು ಬುಕ್ ಮಾಡುವವರ ಸಂಖ್ಯೆ 10 ಪ್ರತಿಶತ ಹೆಚ್ಚಳವಾಗಿದ್ದು, ಪ್ರಸಕ್ತ ವರ್ಷದಲ್ಲಿ 32 ಪ್ರತಿಶತಕ್ಕೆ ತಲುಪಿದೆ.
 
ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಮಾಧ್ಯಮ ಮೂಲಕ ಪ್ರವಾಸವನ್ನ ಬುಕ್ ಮಾಡುವ ಪ್ರಯಾಣಿಕರ ಸಂಖ್ಯೆ , ಟ್ರಾವೆಲ್ ಏಜೆಂಟ್ಸ್ ಬೇಡಿಕೆಯಲ್ಲಿ ಕುಸಿತ ಕಂಡಿದೆ. 2015 ರ ಸಾಲಿನಲ್ಲಿ ಟ್ರಾವೆಲ್ ಏಜೆಂಟ್ಸ್ ಬೇಡಿಕೆ 11.2 ಪ್ರತಿಶತದಷ್ಟಿದ್ದು, 2016 ರ ಸಾಲಿನಲ್ಲಿ 8 ಪ್ರತಿಶತಕ್ಕೆ ತಲುಪಿದೆ ಎಂದು ಸಮೀಕ್ಷೆ ತಿಳಿಸುತ್ತಿದೆ.
 
ಬೇಸಿಗೆ ರಜೆ ಪ್ರವಾಸ ಕೈಗೊಳ್ಳುವವರ ಸಂಖ್ಯೆ 2015 ರ ಸಾಲಿನಲ್ಲಿ 35 ಪ್ರತಿಶತವಿದ್ದು, 2016 ರ ಸಾಲಿನಲ್ಲಿ 67.4 ಪ್ರತಿಶತಕ್ಕೆ ಏರಿಕೆಯಾಗಿದೆ. ಭಾರತೀಯ ರೂಪಾಯಿ ಮೌಲ್ಯ 66-67 ಕ್ಕೆ ಕಡಿತಗೊಂಡರು ಸಹ, 2016 ರ ಸಾಲಿನಲ್ಲಿ 31 ಪ್ರತಿಶತ ಪ್ರಯಾಣಿಕರು ತಮ್ಮ ಬೇಸಿಗೆ ರಜೆಯನ್ನು ಅಂತಾರಾಷ್ಟ್ರೀಯ ಪ್ರವಾಸದಲ್ಲಿ ಆಸಕ್ತ ತೊರಿದ್ದಾರೆ.

ದೇಶಿಯವಾಗಿ ಪ್ರವಾಸಿಗರು ಈಶಾನ್ಯ ಪ್ರದೇಶಗಳ ಪ್ರವಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರೆ, ವಿದೇಶ ಪ್ರವಾಸದಲ್ಲಿ ಇಂಡೋನೇಷ್ಯಾದ ಬಾಲಿ ಮತ್ತು ಮಾರಿಷಿಯಸ್ ದೇಶಗಳಿಗೆ ಭೇಟಿ ನೀಡಲು ಹೆಚ್ಚಿನ ಆಸಕ್ತಿ ತೋರಿರುವುದು ಕಂಡು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಶೇಮ್ ಶೇಮ್ ಇಂಡಿಯಾ: ಗೋವಾದಲ್ಲಿ ರಶಿಯನ್ ಮಹಿಳೆಯ ಮೇಲೆ ಅತ್ಯಾಚಾರ