ನಿಮ್ಮ ಬೆಳೆಯುತ್ತಿರುವ ಮಕ್ಕಳು ನೋಡಬಾರದ ಚಿತ್ರಗಳನ್ನು ಅಥವಾ ಹಿಂಸಾತ್ಮಕ ವಿಷಯಗಳಿಗಾಗಿ ಅಂತರ್ಜಾಲವನ್ನು ವೀಕ್ಷಿಸುತ್ತಿದ್ದಾರೆ ಎಂದು ನೀವು ಚಿಂತೆ ಮಾಡುತ್ತೀರಾ? ಇದೀಗ ಚಿಂತೆ ಬಿಡಿ. ಹೊಸ ಆ್ಯಪ್ ಬಿಡುಗಡೆಯಾಗಿದೆ.
ನರವಿಜ್ಞಾನಿಗಳು ಅಶ್ಲೀಲ ವೆಬ್‌ಸೈಟ್ಸ್‌ಗಳನ್ನು ನಿರ್ಬಂಧಿಸಲು ಸಹಾಯ ಮಾಡುವ ವಿಂಡೋಸ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಬರಾರಸ್ ಹಿಂದೂ ವಿಶ್ವವಿದ್ಯಾನಿಲಯದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಐಎಂಎಸ್-ಬಿಎಚ್ಯು) ಪ್ರೊಫೆಸರ್ ಡಾ. ವಿಜಯ್ ನಾಥ್ ಮಿಶ್ರಾ ಅವರು ವಿನ್ಯಾಸಗೊಳಿಸಿದ 'ಹರ್ ಹರ್ ಮಹಾದೇವ್' ಎಂಬ ಅಪ್ಲಿಕೇಶನ್ ಅಶ್ಲೀಲತೆ, ಹಿಂಸಾಚಾರ ಅಥವಾ ಇತರ ಅಶ್ಲೀಲ ವಿಷಯವನ್ನು ಹೊಂದಿರುವ ಅನಗತ್ಯ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುತ್ತದೆ.
ಬಳಕೆದಾರರು 'ಅಶ್ಲೀಲ ಸೈಟ್‌ಗಳನ್ನು ತೆರೆಯಲು ಪ್ರಯತ್ನಿಸಿದಾಗ ಅಪ್ಲಿಕೇಶನ್ ಹಿಂದೂ ಭಕ್ತಿಗೀತೆಗಳನ್ನು ನುಡಿಸುತ್ತದೆ.
ಮಾಧ್ಯಮಗಳೊಂದಿಗೆ ಮಾತನಾಡಿದ, ಡಾ. ವಿಜಯ್ ನಾಥ್ ಮಿಶ್ರಾ, ವೆಬ್ ಬ್ಲಾಕರ್ ಅಪ್ಲಿಕೇಶನ್ ಅನ್ನು ಇಂಟರ್‌ನೆಟ್‌ನಲ್ಲಿ ಸುಲಭವಾಗಿ ದೊರೆಯುವ 'ಅಶ್ಲೀಲವೆಬ್‌ಸೈಟ್‌ಗಳನ್ನು ನಿಯಂತ್ರಿಸಲು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
"ಅಂತರ್ಜಾಲದಲ್ಲಿ ಸುಲಭ ಪ್ರವೇಶದ ಕಾರಣದಿಂದಾಗಿ ಮಾನವ ಮನಸ್ಸುಗಳು ಹಿಂಸಾಚಾರ ಮತ್ತು ಅಶ್ಲೀಲತೆಗೆ ಒಳಗಾಗುತ್ತವೆ. ಈ ಅಪ್ಲಿಕೇಶನ್ ಗುರಿ ಎಂದರೆ ಒಂದು ಫಿಲ್ಟರಿಂಗ್ ವ್ಯವಸ್ಥೆಯನ್ನು ಸ್ಥಳದಲ್ಲಿ ಇಟ್ಟುಕೊಳ್ಳುವುದು ಎಂದರು.
ಅಪ್ಲಿಕೇಶನ್‌ಗೆ 'ಹರ್ ಹರ್ ಮಹಾದೇವ್' ಎಂಬ ಹೆಸರನ್ನು ಯಾಕೆ ಆಯ್ಕೆ ಮಾಡಲಾಯಿತು ಎಂದು ಕೇಳಿದಾಗ ಡಾ. ಮಿಶ್ರಾ ಆ್ಯಪ್ ಆರಂಭಿಕ ಹಂತಗಳಲ್ಲಿರುವುದರಿಂದ ಕೇವಲ ಹಿಂದೂ ಭಕ್ತಿಗೀತೆಯ ಹಾಡುಗಳನ್ನು ಮಾತ್ರ ಹೊಂದಿದೆ, ನಂತರ ಇತರ ಧರ್ಮಗಳ ಭಕ್ತಿಗೀತೆಗಳನ್ನು ಸೇರಿಸಿಕೊಳ್ಳುವುದು ಸುಲಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
3,000 ಕ್ಕಿಂತ ಹೆಚ್ಚು 'ಅಶ್ಲೀಲ' ವೆಬ್‌ಸೈಟ್‌ಗಳನ್ನು ಗುರುತಿಸಿದ ಅಪ್ಲಿಕೇಶನ್, ಫೇಸ್ಬುಕ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮ ಸೈಟ್‌ಗಳ ನಿರ್ಬಂಧವನ್ನು ಸಕ್ರಿಯಗೊಳಿಸಬಹುದು" ಎಂದು ಶ್ರೀವಾಸ್ತವ ಹೇಳಿದರು.
ಆಗಸ್ಟ್ 2015 ರಲ್ಲಿ ಕೇಂದ್ರ ಸರಕಾರ ಸುಮಾರು 850 ಅಶ್ಲೀಲ ವೆಬ್‌ಸೈಟ್‌ಗಳನ್ನು ನಿಷೇಧಿಸಿತ್ತು ಎಂದು ಸ್ಮರಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.