ನವದೆಹಲಿ : ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಹಿಂದೆ ಈ ವಾಹನಗಳ ನೋಂದಣಿ ಶುಲ್ಕ ರದ್ದುಪಡಿಸಿತ್ತು. ಅದೇರೀತಿ ಇದೀಗ ಈ ವಾಹನದ ಮೇಲಿನ ಜಿ.ಎಸ್.ಟಿ. ದರ ಇಳಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಹೌದು. ದೇಶದಲ್ಲಿ 2030 ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆ, ಮಾರಾಟ ಬಂದ್ ಆಗಲಿದೆ ಎನ್ನಲಾಗಿದೆ. ಇದರಿಂದ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾತ್ರ ಉತ್ಪಾದನೆಯಾಗಲಿದೆ. ಆದಕಾರಣ ಎಲೆಕ್ಟ್ರಿಕ್ ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೋಂದಣಿ ಶುಲ್ಕ ರದ್ದುಪಡಿಸುವುದರ ಜೊತೆಗೆ ಜಿ.ಎಸ್.ಟಿ. ದರ ಇಳಿಕೆ ಮಾಡುವ ನಿರ್ಧಾರ ಮಾಡಿದೆ.
ಹೊಸ ಎಲೆಕ್ಟ್ರಿಕ್ ವಾಹನ ಹಾಗೂ , ಹಳೆಯ ಎಲೆಕ್ಟ್ರಿಕ್ ವಾಹನಗಳಿಗೂ ಶುಲ್ಕ ರದ್ದು ಮಾಡಿದ ಸರ್ಕಾರ ಕೇಂದ್ರೀಯ ಮೋಟಾರು ವಾಹನಗಳ ನಿಯಮ 1989 ಕ್ಕೆ ತಿದ್ದುಪಡಿ ಮಾಡಿದೆ. ಅಲ್ಲದೇ ಇದೀಗ ಎಲೆಕ್ಟ್ರಿಕ್ ವಾಹನಗಳ ಜಿ.ಎಸ್.ಟಿ. ದರವನ್ನು ಶೇ. 12 ರಿಂದ ಶೇ. 5 ಕ್ಕೆ ಇಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.