Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇನ್ನುಮುಂದೆ ಪೆಟ್ರೋಲ್, ಡಿಸೇಲ್ ಬೇಕಾದ್ರೆ ಪೆಟ್ರೋಲ್ ಬಂಕ್ ಗೆ ಹೋಗಬೇಕಾಗಿಲ್ಲ. ಯಾಕೆ ಗೊತ್ತಾ?

ಇನ್ನುಮುಂದೆ   ಪೆಟ್ರೋಲ್, ಡಿಸೇಲ್ ಬೇಕಾದ್ರೆ ಪೆಟ್ರೋಲ್ ಬಂಕ್ ಗೆ ಹೋಗಬೇಕಾಗಿಲ್ಲ. ಯಾಕೆ ಗೊತ್ತಾ?
ನವದೆಹಲಿ , ಗುರುವಾರ, 20 ಜೂನ್ 2019 (08:01 IST)
ನವದೆಹಲಿ : ವಾಹನಗಳಲ್ಲಿ ಪೆಟ್ರೋಲ್, ಡಿಸೇಲ್ ಖಾಲಿಯಾದರೆ ಪೆಟ್ರೋಲ್ ಬಂಕ್ ಗೆ ಹೋಗಬೇಕಿತ್ತು. ಆದರೆ ಇನ್ನುಮುಂದೆ  ಪೆಟ್ರೋಲ್, ಡಿಸೇಲ್ ಪೆಟ್ರೋಲ್ ಬಂಕ್ ನಲ್ಲಿ ಮಾತ್ರವಲ್ಲ ವಸ್ತುಗಳನ್ನು ಖರೀದಿ ಮಾಡುವ ಚಿಲ್ಲರೆ ಅಂಗಡಿಗಳಲ್ಲೂ ದೊರೆಯಲಿದೆಯಂತೆ.




ಹೌದು. ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಈ ಮಹತ್ವದ ಯೋಜನೆ ಜಾರಿಗೆ ತರುವ ನಿರ್ಧಾರ ಮಾಡಿದೆಯಯಂತೆ. ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಸ್ತಾವನೆಯನ್ನು ಸಿದ್ಧಪಡಿಸಲಿದ್ದು, ತೈಲ ವ್ಯಾಪಾರಕ್ಕೆ ಸಂಬಂದಪಟ್ಟ ಈಗಿನ ನಿಯಮಗಳನ್ನು ಸಡಿಲಗೊಳಿಸುವ ಸಾಧ್ಯತೆಯಿದೆ. ಈಗಾಗಲೇ ಇರುವ  ನಿಯಮ ಬದಲಾವಣೆಯಾದರೆ ಚಿಲ್ಲರೆ ಮಳಿಗೆಗಳಲ್ಲೂ ಪೆಟ್ರೋಲ್-ಡಿಸೇಲ್ ಸಿಗಲಿದೆ ಎನ್ನಲಾಗಿದೆ.


ಬ್ರಿಟನ್ ದೇಶಗಳಲ್ಲಿ ಈಗಾಗಲೇ ಚಿಲ್ಲರೆ ಮಳಿಗೆಗಳಲ್ಲಿ ಪೆಟ್ರೋಲ್ ಸಿಸಿಗುತ್ತಿದ್ದು ಇದರಿಂದ  ಭಾರತಕ್ಕೆ ಪ್ರೇರಣೆಯಾಗಿದೆ. ಈ ನಿಯಮ ಜಾರಿಗೆ ಬಂದರೆ ಸಾಮಾನ್ಯ ಜನರು ಸುಲಭ ಇಂಧನ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಸೌದಿ ಅರೇಬಿಯಾದ ಪ್ರಸಿದ್ಧ ಕಂಪನಿಗಳು ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಸುಲಭವಾಗಿ ಪ್ರವೇಶ ಮಾಡಬಹುದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್.ವಿಶ್ವನಾಥ್ – ರಾಮಲಿಂಗಾರೆಡ್ಡಿ ಭೇಟಿಯಲ್ಲಿ ಏನೇನಾಯ್ತು?