ನವದೆಹಲಿ : ಬೇರೆ ಕಂಪೆನಿಗಳಿಗೆ ಟಕ್ಕರ್ ನೀಡಲು ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ 599 ರೂ.ವಿನ ಹೊಸ ಪ್ರಿಪೇಯ್ಡೆ ರಿಚಾರ್ಜ್ ಪ್ಲಾನ್ ಜೊತೆಗೆ 'ಭಾರ್ತಿ ಎಎಕ್ಸ್ಎ ಲೈಫ್ ಇನ್ಸೂರೆನ್ಸ್' ನೀಡುತ್ತಿದೆ.
ಹೌದು. ಏರ್ಟೆಲ್ ನ 599 ರೂ. ನ ಪ್ಲಾನ್ ನಲ್ಲಿ ಪ್ರತಿದಿನ 2GB ಡೇಟಾವನ್ನು ನೀಡುತ್ತಿದೆ. ಜೊತೆಗೆ ಅನಿಯಮಿತ ಕರೆ ಹಾಗೂ ಪ್ರತಿ ದಿನ 100 SMSಗಳನ್ನು ಉಚಿತವಾಗಿ ನೀಡುತ್ತಿದೆ. ಈ ಪ್ಲ್ಯಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಸದ್ಯಕ್ಕೆ ಈ ರೀಚಾರ್ಜ್ ಪ್ಲಾನ್ ತಮಿಳುನಾಡು, ಪಾಂಡಿಚೇರಿ ಪ್ರದೇಶಿಗರಿಗೆ ಮಾತ್ರ ಲಭ್ಯವಿದೆ. ಸ್ವಲ್ಪ ದಿನಗಳ ಬಳಿಕ ಭಾರತದ ಇತರ ರಾಜ್ಯಗಳಿಗೂ ಸಿಗುವುದಾಗಿ ಸಂಸ್ಥೆ ತಿಳಿಸಿದೆ.
ಅಷ್ಟೇ ಅಲ್ಲದೇ ಈ ಹೊಸ ಪ್ರಿಪೇಯ್ಡೆ ರಿಚಾರ್ಜ್ ಪ್ಲಾನ್ ಜೊತೆಗೆ ಗ್ರಾಹಕರಿಗೆ ವಿಶೇಷ ಆಫರ್ 4 ಲಕ್ಷ ರೂ.ವಿನ 'ಭಾರ್ತಿ ಎಎಕ್ಸ್ಎ ಲೈಫ್ ಇನ್ಸೂರೆನ್ಸ್' ನೀಡುತ್ತಿದೆ. 18 ರಿಂದ 54 ವರ್ಷ ವಯೋಮಿತಿಯಿರುವ ಗ್ರಾಹಕರಿಗೆ ಈ ಪ್ರಯೋಜನೆ ಸಿಗಲಿದೆ. ಇದಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆ ಅಗತ್ಯವಿಲ್ಲ ಎಂದು ಕಂಪೆನಿ ತಿಳಿಸಿದೆ.