ನವದೆಹಲಿ : ಬಳಕೆದಾರರ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಸಾವಿರಾರು ಅಪ್ಲಿಕೇಶನ್ ಗಳನ್ನು ಸ್ಥಗಿತಗೊಳಿಸಿರುವುದಾಗಿ ಎಂದು ಫೇಸ್ ಬುಕ್ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.
ಮಾರ್ಚ್ 2018 ರಲ್ಲಿ ನಡೆದ ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣದ ಬಳಿಕ ಗೌಪ್ಯತೆಯನ್ನು ಉಳಿಸಿಕೊಳ್ಳಲು ಫೇಸ್ ಬುಕ್ ಈ ಕ್ರಮಗಳನ್ನು ಕೈಗೊಂಡಿದ್ದು, ಕಂಪನಿಯು ಪ್ರಾರಂಭಿಸಿದ ಡೇಟಾವನ್ನು ಡೆವಲಪರ್ ಗಳು ಹೇಗೆ ಬಳಸುತ್ತಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಇದರ ಭಾಗವಾಗಿ ಆಯಪ್ ಗಳನ್ನು ತೆಗೆದು ಹಾಕಲಾಗಿದೆ ಎನ್ನಲಾಗಿದೆ.
‘ನಮ್ಮ ಕೋರಿಕೆಗೆ ಸ್ಪಂದಿಸದ ಹಾಗೂ ಮಾಹಿತಿ ನೀಡದ ಆಯಪ್ ಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ’ ಎಂದು ಫೇಸ್‌ಬುಕ್ ಉಪಾಧ್ಯಕ್ಷ ಇಮ್ ಆರ್ಚಿ ಬಾಂಗ್ ತಿಳಿಸಿದ್ದಾರೆ.