ನವದೆಹಲಿ : ಭಾರತದಲ್ಲಿ ಆಪಲ್‌ನ ಎರಡು ಹೊಸ ಫೋನ್‌ಗಳು ಮಾರಾಟವಾಗದೇ ದಾಸ್ತಾನು ಹಾಗೆಯೇ ಉಳಿದುಕೊಂಡಿದೆ ಎಂದು ರಿಟೈಲ್ ಮಳಿಗೆದಾರರು ಹೇಳುವುದರ ಮೂಲಕ ಆಪಲ್‌ಗೆ ಶಾಕ್ ನೀಡಿದ್ದಾರೆ.
ಕಳೆದ ವಾರವಷ್ಟೇ ಆಪಲ್‌ನ ಐಫೋನ್‌ನ ಚಾರ್ಜಿಂಗ್ ಸಮಸ್ಯೆಯ ಕುರಿತು ವರದಿ ಬಂದಿದ್ದವು. ಆದರೆ ಇದೀಗ ಆಪಲ್‌ನ ಹೊಸ ಐಫೋನ್ ಎಕ್ಸ್ ಎಸ್ ಮತ್ತು ಐಫೋನ್ ಎಕ್ಸ್ ಎಸ್ ಮ್ಯಾಕ್ಸ್ ಫೋನ್‌ಗಳು ಮಾರಾಟವಾಗುತ್ತಿಲ್ಲ ಎಂದು ರಿಟೈಲ್ ಮಳಿಗೆದಾರರು ಹೇಳಿದ್ದಾರೆ.
ಕಳೆದ ವರ್ಷದ ಐಫೋನ್ ಎಕ್ಸ್ ಗೆ ಹೋಲಿಸಿದರೆ ಸೆ.28ರಂದು ಬಿಡುಗಡೆಯಾದ ಈ ಎರಡು ಹೊಸ ಫೋನ್‌ಗಳು ಮೊದಲ ಮೂರು ದಿನಗಳಲ್ಲಿ ಶೇ.55ರಷ್ಟು ಮಾತ್ರ ಮಾರಾಟ ಆಗಿದೆ. ಭಾರತದಲ್ಲಿ ಮಾರಾಟಕ್ಕಾಗಿ 1,00,000 ಐಫೋನ್‌ಗಳನ್ನು ಆಪಲ್ ತರಿಸಿಕೊಂಡಿತ್ತು. ಆದರೆ ಶೇ.40-45 ರಷ್ಟು ಸೆಟ್‌ಗಳು ಹಾಗೆಯೇ ಉಳಿದುಕೊಂಡಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.