ಮುಂಬೈ : ಉದ್ಯಮಿ ವಿಜಯ್ ಮಲ್ಯ ಅವರ ವಿಮಾನವನ್ನು 2013ರಿಂದ ಮುಂಬಯಿ ಏರ್ಪೋರ್ಟ್ನಲ್ಲಿ ಪಾರ್ಕಿಂಗ್ ಮಾಡಲಾಗಿದೆಯಂತೆ. ಇದರಿಂದಾಗಿ ಕಳೆದ 5 ವರ್ಷಗಳಿಂದ ವಿಮಾನ ನಿಲ್ದಾಣಕ್ಕೆ 10 ಕೋಟಿ ರೂ. ತನಕ ನಷ್ಟವಾಗಿದೆಯಂತೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಗಂಟೆಗೆ 15,000 ರೂ. ಪಾರ್ಕಿಂಗ್ ಶುಲ್ಕವಿದೆ. ಇಲ್ಲಿ ನಿಂತಿರುವ ಮಲ್ಯರ ಖಾಸಗಿ ವಿಮಾನದಿಂದ ಏರ್ಪೋರ್ಟ್ ನಷ್ಟ ಅನುಭವಿಸಿದೆ. ವಿಮಾನವನ್ನು ತೆರವುಗೊಳಿಸಲು ಹೈಕೋರ್ಟ್ ಆದೇಶ ನೀಡಿದರೂ, ಅದನ್ನು ಕೊಳ್ಳುವವರಿಲ್ಲದೇ ಅಲ್ಲಿಯೇ ಉಳಿದಿದೆ. ಖರೀದಿ ಪ್ರಕ್ರಿಯೆ ನಾಲ್ಕು ಸಲವೂ ವಿಫಲವಾಗಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ