Webdunia - Bharat's app for daily news and videos

Install App

ಹೊರಗಡೆ ಸೆಕೆಯಿಂದ ಪರದಾಡುವವರಿಗೆ ಸೋನಿ ಕಂಪೆನಿ ತಯಾರಿಸಿದೆ ಕಿರು ಎಸಿ

Webdunia
ಶನಿವಾರ, 27 ಜುಲೈ 2019 (06:43 IST)
ನವದೆಹಲಿ : ಹೊರಗಡೆ ಹೋದಾಗ ಸೆಕೆ ತಾಳಲಾರದೆ ಕೆಲವರು ಒದ್ದಾಡುತ್ತಾರೆ. ಅಂತವರು ಇನ್ನುಮುಂದೆ ಬಟ್ಟೆಯ ಜೊತೆ ಎಸಿಯನ್ನು ಧರಿಸಿಕೊಂಡು ಹೋಗಬಹುದು.



ಹೌದು. ಸೋನಿ ಕಂಪನಿ ವಿಭಿನ್ನ ಎಸಿಯೊಂದನ್ನು ತಯಾರಿಸಿದ್ದು ಈ ಪೋರ್ಟಬಲ್ ಎಸಿಗೆ ಕಂಪನಿ ರಿಯಾನ್ ಪಾಕೆಟ್ ಎಂದು ಹೆಸರಿಟ್ಟಿದೆ.  ಇದು ಮೊಬೈಲ್ ಫೋನ್ ಗಿಂತ ಚಿಕ್ಕದು ಹಾಗೂ ಹಗುರವಾಗಿದ್ದು, ಇದನ್ನು ಬಟ್ಟೆ ಜೊತೆ ಧರಿಸಬಹುದು. ಆದರೆ ಈ ಸಾಧನವನ್ನು ಬಳಸಬೇಕಿದ್ದರೆ, ವಿಶೇಷ ರೀತಿಯ ಒಳ ಅಂಗಿಯನ್ನು ಧರಿಸಬೇಕಾಗುತ್ತದೆ. ಈ ಒಳ ಅಂಗಿಯು ಸಾಧನದ  ಜೊತೆಗೆ ಸಿಗಲಿದೆ.


 ಈ ಎಸಿಯನ್ನು ಸ್ಮಾರ್ಟ್ ಫೋನ್ ಮೂಲಕ ನಿಯಂತ್ರಿಸಬಹುದು. ಅಲ್ಲದೇ ಇದರಲ್ಲಿ ವಾತಾವರಣಕ್ಕೆ ಅನುಗುಣವಾಗಿ ಉಷ್ಣತೆಯನ್ನು ತನ್ನಿಂತಾನಾಗಿ ಹೊಂದಿಸುವ ಸ್ವಯಂಚಾಲಿತ ವ್ಯವಸ್ಥೆಯೂ ಇದೆ. ಈ ಎಸಿಯನ್ನು ಎರಡು ಗಂಟೆ ಚಾರ್ಜ್ ಮಾಡಿದ್ರೆ ನೀವು 90 ನಿಮಿಷಗಳ ಕಾಲ ಬಳಸಬಹುದು.


ಸೋನಿ ಕಂಪನಿಯ ಈ ಎಸಿ ಬೆಲೆ 8990 ರೂಪಾಯಿ. ಒಳ ಉಡುಪಿನ ಬೆಲೆ 12 ಸಾವಿರ ರೂಪಾಯಿ. ಇದು ಸದ್ಯಕ್ಕೆ ಜಪಾನ್ ನಲ್ಲಿ ಮಾತ್ರ ಲಭ್ಯವಿದೆ. ಹಾಗೇ ಈವರೆಗೂ ಪುರುಷರಿಗೆ ಮಾತ್ರ ಈ ಬಟ್ಟೆ ತಯಾರಿಸಲಾಗಿದ್ದು, ಮಹಿಳೆಯರಿಗೆ ಲಭ್ಯವಾಗಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments