ನವದೆಹಲಿ: ಕಾರು ಖರೀದಿ ಮಾಡಬೇಕೆಂದುಕೊಂಡಿದ್ದೀರಾ? ಹಾಗಿದ್ದರೆ ನಿಮಗೊಂದು ಶಾಕ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಇನ್ನು ಕಾರು ಖರೀದಿ ದುಬಾರಿಯಾಗಲಿದೆ. ಜಿಎಸ್ ಟಿ ಜಾರಿಗೆ ಬಂದ ನಂತರ ಮಧ್ಯಮ ಗಾತ್ರದ ಕಾರುಗಳ ಮೇಲಿನ ಸೆಸ್ ಶೇ. 25 ರಷ್ಟು ಹೇರಲು ಕೇಂದ್ರ ಮುಂದಾಗಿದೆ. ಸದ್ಯ 15% ಸೆಸ್ ಇದು 10% ಏರಿಕೆಯಾಗಲಿದೆ.
ಇದಕ್ಕೆ ಈಗಾಗಲೇ ಕೇಂದ್ರ ಸಂಪುಟದ ಅನುಮತಿ ದೊರಕಿದೆ. ಹೀಗಾಗಿ ಮಧ್ಯಮ, ದೊಡ್ಡ ಗಾತ್ರದ ಮತ್ತು ಐಷಾರಾಮಿ ಕಾರುಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಜಿಎಸ್ ಟಿ ಜಾರಿಗೆ ಬಂದ ಮೇಲೆ ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ಕೊಂಚ ಮಟ್ಟಿನ ಕಡಿತವಾಗಿತ್ತು. ಆದರೆ ಸೆಸ್ ಹಾಕುವುದರೊಂದಿಗೆ ಮತ್ತೆ ಕಾರಿನ ದರ ಏರಿಕೆಯಾಗಲಿದೆ.