ದಕ್ಷಿಣ ಕೊರಿಯಾ ಎಲಕ್ಟ್ರಾನಿಕ್ ಉತ್ಪನ್ನಗಳ ದಿಗ್ಗಜ ಸ್ಯಾಂಸಂಗ್ ಶೀಘ್ರದಲ್ಲೇ ಎಸ್ 8 ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಮೊದಲ ಹಂತದಲ್ಲಿ 10 ಲಕ್ಷ ಎಸ್ 8 ಫೋನ್‌ಗಳನ್ನು ಉತ್ಪಾದಿಸಬೇಕೆಂದು ಗುರಿಯಾಗಿ ಇಟ್ಟುಕೊಂಡಿದೆ ಎಂದು ಮೂಲಗಳು ಹೇಳುತ್ತಿವೆ.
2016ರಲ್ಲಿ ತಾಂತ್ರಿಕ ದೋಷದ ಕಾರಣ ಕೆಲವು ಕಡೆ ಗೆಲಾಕ್ಸಿ ನೋಟ್ 7 ಫೋನ್‌ಗಳು ಸ್ಫೋಟಗೊಂಡಿದ್ದವು. ಇದರಿಂದ ಕಂಪನಿಗೆ ಭಾರಿ ಹೊಡೆತ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಸ್ಯಾಂಸಂಗ್ ಕಂಪನಿ ಎಸ್ 8 ಸ್ಮಾರ್ಟ್‍ಫೋನ್ ಬಗ್ಗೆ ಬಹಳಷ್ಟು ಆಸೆಗಳನ್ನು ಇಟ್ಟುಕೊಂಡಿದೆ.
ತಾಂತ್ರಿಕವಾಗಿ ಯಾವುದೇ ತೊಂದರೆಯಾಗದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಇದಿಷ್ಟೇ ಅಲ್ಲದೆ ನೋಟ್ 7ರಿಂದ ಉಂಟಾದ ನಷ್ಟವನ್ನು ಎಸ್ 8ನಿಂದ ತುಂಬಿಸಬೇಕೆಂದು ಯೋಚಿಸಿದೆ. ಮಾರ್ಚ್ ತಿಂಗಳಲ್ಲಿ ಎಸ್ 8 ಉತ್ಪಾದನೆ ಆರಂಭಿಸಿ ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.