ಫಿಯಟ್ ಕ್ರಿಸ್ಲರ್ ಆಟೋಮೊಬೈಲ್ಸ್ ಇಂಡಿಯಾ ತನ್ನ ಕಾರಿನ ಬೆಲೆಗಳನ್ನು ಇಳಿಸಿದೆ. ಸೆಡಾನ್ ಲಿನಿಯಾ ರೂ.77.121, ಹ್ಯಾಚ್‍ಬ್ಯಾಕ್ ಪುಂಟೋ ಈವೊ ರೂ.47,364 ಕಡಿತಗೊಳಿಸಿದೆ. ಭಾರತದಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಈ ಬೆಲೆ ಇಳಿಕೆ ಎಂದಿದೆ ಕಂಪನಿ.
ಬೆಲೆ ಇಳಿಕೆ ಬಳಿಕ ಲಿನಿಯಾ ರೂ.7.25ರಿಂದ ರೂ.9.99 ಲಕ್ಷಗಳ ನಡುವೆ ಲಭ್ಯವಾಗಲಿದೆ. ಇದಕ್ಕೂ ಮುನ್ನ ರೂ.7.82ರಿಂದ ರೂ.10.76 ಲಕ್ಷಗಳ ನಡುವೆ ಬೆಲೆ ಇದ್ದದ್ದನ್ನು, ಶೇ.7.3ರಷ್ಟು ಇಳಿಕೆ ಮಾಡಿದೆ. ಇನ್ನು ಪುಂಟೋ ಬೆಲೆಯಲ್ಲೂ ಶೇ.7ರಷ್ಟು ಇಳಿಕೆ ಮಾಡಿರುವುದಾಗಿ ಪ್ರಕಟಿಸಿದೆ.
ಈ ಹಿಂದೆ ರೂ5.85ರಿಂದ ರೂ.7.92 ಲಕ್ಷಗಳ ನಡುವೆ ಫುಂಟೋ ಬೆಲೆ ಇತ್ತು. ಪ್ರಸ್ತುತ ರೂ.5.45 ರಿಂದ ರೂ.7.55 ಲಕ್ಷಗಳಿಗೆ ಇಳಿಕೆಯಾಗಿದೆ. "ಬೆಲೆ ಇಳಿಕೆಯಲ್ಲಿ ಎಚ್ಚರಿಕೆಯಿಂದ ವ್ಯವಹಿಸುತ್ತಿದ್ದೇವೆ. ನಗರ ಪ್ರದೇಶಗಳಲ್ಲಿ ಸ್ಪರ್ಧೆ ಜಾಸ್ತಿ ಇದೆ. ಈ ಹಿನ್ನೆಲೆಯಲ್ಲಿ ಅವೆಂಟುರಾ ಬೆಲೆಗಳನ್ನು ಇಳಿಸಿದ್ದೇವೆ. ಈಗ ಲಿನಿಯಾ, ಪುಂಟೋ ಬೆಲೆಗಳನ್ನು ಶೇ. 7.3ರಿಂದ 7ರಷ್ಟು ಕಡಿಮೆ ಮಾಡಿದ್ದೇವೆ ಎಂದು ಕಂಪನಿ ಕಾರ್ಯನಿರ್ವಹಣಾಧಿಕಾರಿ ಕೆವಿನ್ ಫ್ಲಯನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.