ರೆನೋ ಇಂಡಿಯಾ ಮತ್ತಷ್ಟು ಅಭಿವೃದ್ಧಿ ಪಡಿಸಿರುವ ಕ್ವಿಡ್ ಆರ್ಎಕ್ಸ್ಎಲ್ ಬಿಡುಗಡೆ ಮಾಡಿದೆ. ಸ್ಮಾರ್ಟ್ ಕಂಟ್ರೋಲ್ ಎಫಿಸಿಯನ್ಸಿ (ಎಸ್ಸಿಇ) ತಂತ್ರಜ್ಞಾನದೊಂದಿಗೆ ಕೂಡಿರುವ ಈ ಕಾರನ್ನು ಎರಡು ವಿಧಗಳಲ್ಲಿ ಬಿಡುಗಡೆ ಮಾಡಿದೆ.
ಮ್ಯಾನ್ಯುಯಲ್ ಕಾರಿನ ಬೆಲೆ ರೂ.3.54 ಲಕ್ಷಗಳು, ಆಟೋಮೆಟಿಕ್ ಕಾರಿನ ಬೆಲೆ ರೂ.3.84 ಲಕ್ಷಗಳು (ಎಕ್ಸ್-ಶೋರೂಂ ದೆಹಲಿ) ಎಂದು ಕಂಪೆನಿ ನಿರ್ಧರಿಸಿದೆ. 1,000 ಸಿಸಿ ಸಾಮರ್ಥ್ಯ ಇರುವ ಈ ವಾಹನ ಎರಡು, ಮೂರು, ನಾಲ್ಕನೇ ಶ್ರೇಣಿ ನಗರಗಳ ಗ್ರಾಹಕರನ್ನು ಆಕರ್ಷಿಸುತ್ತಿದೆ ಎಂದು ರೆನೋ ಇಂಡಿಯಾ ಮುಖ್ಯಕಾರ್ಯ ನಿರ್ವಹಣಾಧಿಕಾರಿ (ಸಿಇಓ), ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಸುಮಿತ್ ಸಾನೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.