ರಿಲಾಯನ್ಸ್ ಒಡೆತನದ ಮುಖ್ಯಸ್ಥ ಮುಕೇಶ್ ಅಂಬಾನಿ ಹಲವು ದಿನಗಳ ನಿರೀಕ್ಷಿತ ರಿಲಯನ್ಸ್ ಜಿಯೋ 4ಜಿ ಸೇವೆಯನ್ನು ಗುರುವಾರ ಅನಾವರಣಗೊಳಿಸಿದ್ದಾರೆ. ಕಂಪೆನಿಯ 4ಜಿ ಎಲ್‌ಟಿಇ ನೆಟ್‌ವರ್ಕ್ ಜಗತ್ತಿನಲ್ಲಿ ಅತೀ ದೊಡ್ಡದು ಎಂದು ತಿಳಿಸಿದ್ದಾರೆ.
ಜಿಯೋ 4ಜಿ ಸೇವೆ ಬಿಡುಗಡೆ ಮಾಡುವ ಮೂಲಕ ರಿಲಯನ್ಸ್ ಟೆಲಿಕಾಂ ಸಂಸ್ಥೆ, ವೈಸ್ ಕರೆಗಳು ಸೇರಿದಂತೆ ಅಪ್ಲಿಕೇಶನ್, 4ಜಿ ಸೇವೆ ಹಾಗೂ ವಿವಿಧ ಸೌಲಭ್ಯಗಳನ್ನು ಸೆಪ್ಟೆಂಬರ್ 5 ರಿಂದ ಡಿಸೆಂಬರ್ 31ರವರೆಗೂ ಉಚಿತವಾಗಿ ನೀಡಲಿದೆ.
* ವಾಯ್ಸ್ ಕರೆಗಳಿಗಾಗಿ ಜಿಯೋ ಬಳಕೆದಾರರು ಯಾವುದೇ ಹಣ ಸಂದಾಯ ಮಾಡಬೇಕಿಲ್ಲ
* ಭಾರತದಾತ್ಯಂತ ರಿಲಯನ್ಸ್ ಜಿಯೋ ರೋಮಿಂಗ್ ಚಾರ್ಚ್ ಉಚಿತ
* ಕೇವಲ 50 ರೂಪಾಯಿ ದರದಲ್ಲಿ 1ಜಿಬಿ. ಇತರೆ ಟಿಲಿಕಾಂ ಸಂಸ್ಥೆಗೆ ಹೋಲಿಸಿದರೆ ಈ ದರ ಕೇವಲ 1/10th ಅಷ್ಟೇ
* ಜಿಯೋ ಡೇಟಾ ಸೇವೆ ಕೇವಲ 10 ಪ್ಲ್ಯಾನ್‌ಗಳನ್ನು ಒಳಕೊಂಡಿದೆ.
* ವಿದ್ಯಾರ್ಥಿಗಳಿಗಾಗಿ ವಿಶೇಷ ರಿಯಾಯಿತಿ ಘೋಷಣೆ. ಇದೀಗ ವಿದ್ಯಾರ್ಥಿಗಳು 25 ಪ್ರತಿಶತ ಹೆಚ್ಚು ಡೇಟಾ ಸೇವೆಯನ್ನು ಪಡೆಯಬಹುದು.
* 135 ಎಮ್‌ಬಿಪಿಎಸ್ ಡೌನ್‌ಲೋಡಿಂಗ್ ಸ್ಪೀಡ್ ಭರವಸೆ ನೀಡಿರುವ ರಿಲಯನ್ಸ್ ಜಿಯೋ ನೆಟ್‌ವರ್ಕ್
* 2017, ಡಿಸೆಂಬರ್ 31ರವರೆಗೂ ಉಚಿತವಾಗಿ ಕೇವಲ 15 ಸಾವಿರ ರೂಪಾಯಿ ವಾರ್ಷಿಕ ಚಂದಾ ಮೌಲ್ಯದಲ್ಲಿ ಜಿಯೋ ಅಪ್ಲಿಕೇಶನ್ ಬುಕಿಂಗ್
* ಅತೀ ದೊಡ್ಡ 4ಜಿ ಎಲ್‌ಟಿಇ ನೆಟ್‌ವರ್ಕ್ ನೀಡಿದ ರಿಲಯನ್ಸ್ ಜಿಯೋ
* 2016 ಡಿಸೆಂಬರ್‌ವರೆಗೆ ಉಚಿತ ಆಫರ್ಸ್ ನೀಡುತ್ತಿರುವ ಜಿಯೋ
* ಎಲ್‌ವಾಯ್‌ಎಫ್ ಅಡಿಯಲ್ಲಿ ಕೇವಲ 2999 ರೂಪಾಯಿಗಳಲ್ಲಿ 4ಜಿ ಸ್ಮಾರ್ಟ್‌ಪೋನ್ ಘೋಷಣೆ
* ಜಿಯೋ ಕೇವಲ 4ಜಿ ಸೇವೆ ಮಾತ್ರವಲ್ಲದೆ, 5ಜಿ ಹಾಗೂ 6ಜಿ ಸೇವೆ ನೀಡಲು ಸಜ್ಜಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ