ಕೇಂದ್ರ ಸರ್ಕಾರವು ಐದು ವರ್ಷಗಳ ಮರುಕಳಿಸುವ ಠೇವಣಿ ಯೋಜನೆಯ RD ಬಡ್ಡಿದರವನ್ನು ಡಿಸೆಂಬರ್ ತ್ರೈಮಾಸಿಕಕ್ಕೆ 6.5 ಶೇಕಡಾದಿಂದ 6.7 ಕ್ಕೆ ಏರಿಸಿದೆ. ಆದರೆ, ಇತರೆ ಎಲ್ಲಾ ಇತರ ಸಣ್ಣ ಉಳಿತಾಯ ಯೋಜನೆಗಳ ದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಐದು ವರ್ಷಗಳ RD ಯಲ್ಲಿನ ಪರಿಣಾಮಕಾರಿ ಹೆಚ್ಚಳವು 20 ಬೇಸಿಸ್ ಪಾಯಿಂಟ್ಸ್ ಆಗಿದ್ದು, ಇತರ ಸಣ್ಣ ಉಳಿತಾಯ ಯೋಜನೆಗಳ ದರಗಳು ಈ ಹಿಂದಿನಂತೆಯೇ ಇದೆ. ಉಳಿತಾಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇಕಡಾ 4 ಮತ್ತು ಒಂದು ವರ್ಷದ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇಕಡಾ 6.9 ಕ್ಕೆ ಉಳಿಸಿಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯದ ಸುತ್ತೋಲೆ ತಿಳಿಸಿದೆ.